ಬ್ಯಾಡಗಿ27: ಯಾವುದೇ ಜೀವಿಗೂ ಆಮ್ಲಜನಕವಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲವೆಂಬ ವಿಚಾರದಿಂದಲೇ ಗಿಡ ಮರಗಳ ಮಹತ್ವವನ್ನು ನಾವೆಲ್ಲರೂ ಅರಿಯಬೇಕಿದ್ದು, ಪ್ರತಿಯೊಬ್ಬರೂ ಹಸಿರನ್ನು ಉಳಿಸಿ ಬೆಳೆಸಲು ಕಾಯರ್ೊನ್ಮುಖರಾಗಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ್ ಕರೆ ನೀಡಿದರು.
ಪಟ್ಟಣದ ನೂತನ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ' ಭಾರತ ಸಂವಿಧಾನದ 70 ನೇ, ವರ್ಷಾಚರಣೆಯ ನಿಮಿತ್ತ ' ಸಂವಿಧಾನ ಮತ್ತು ಮೂಲಭೂತ ಕರ್ತವ್ಯಗಳ' ವಾರ್ಷಿಕ ಮಾಲಿಕೆಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಹಸಿರಿಲ್ಲದೆ ಉಸಿರಿಲ್ಲ ಎಂಬ ಕಹಿ ಸತ್ಯವನ್ನು ನಾವು ತಿಳಿಯ ಬೇಕಿದ್ದು, ಗಿಡ ಮರಗಳನ್ನು ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯಗಳಲ್ಲಿ ರೆಸಾಟರ್್ಗಳನ್ನು ಕಟ್ಟುವ ಮೂಲಕ ನೈಸಗರ್ಿಕ ವಿಕೋಪಕ್ಕೆ ಒಳಗಾಗಿದ್ದೇವೆ. ಪ್ರತಿಯೊಬ್ಬರೂ ಒಬ್ಬನಿಗೆ ಒಂದು ಮರ ಎಂಬ ಹೊಣೆಗಾರಿಕೆ ಹೊತ್ತು ಹಸಿರನ್ನು ಉಳಿಸಲು ಮುಂದಾಗಬೇಕೆಂದು ತಿಳಿಸಿದರು.
ಕಿರಿಯ ದಿವಾಣಿ ನ್ಯಾಯಾಧೀಶ ರಾಜೇಶ ಹೊಸಮನೆ ಅವರು ಮಾತನಾಡಿ ಸಾಲು ಮರದ ತಿಮ್ಮಕ್ಕನಂತಹ ಪರಿಸರವಾದಿಗಳು ನಮಗೆಲ್ಲಾ ಮಾದರಿಯಾಗಬೇಕೆ ಹೊರತು ಪಾಶ್ಚಾತ್ಯ ಸಂಸ್ಕೃತಿಯಲ್ಲ, ಗಿಡ ಮರಗಳು ಮತ್ತು ವನ್ಯ ಜೀವಿಗಳನ್ನು ನಾವು ಉಳಿಸಿ ಬೆಳೆಸದಿದ್ದಲ್ಲಿ ಆಮ್ಲಜನಕದ ಸಿಲಿಂಡರ್ ಗಳನ್ನು ಹೊತ್ತು ತಿರುಗಾಡಬೇಕಾದ ದಿನಗಳು ದೂರವಿಲ್ಲ ಎಂದರು.
ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ 'ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರ ಹೊಣೆಗಾರಿಕೆ' ಹಾಗೂ ನ್ಯಾಯವಾದಿ ಎಚ್ ಬಿ ಮಡಿವಾಳರ ' ಸಾಮಾನ್ಯ ಕಾನೂನುಗಳು ' ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಪ್ರೌಢಶಾಲೆಯ ಆಡಳಿತಾಧಿಕಾರಿ ಎಸ್ ಜಿ ಕೊಂಬಳಿ ವಹಿಸಿದ್ದರು. ನ್ಯಾಯವಾದಿಗಳಾದ ಭಾರತಿ ಕುಲಕಣರ್ಿ, ಲಕ್ಷ್ಮಿ ಗುಗ್ಗರಿ, ಉಪವಲಯ ಅರಣ್ಯಾಧಿಕಾರಿ ಎಂ ಎಂ ಪೂಜಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.