ಬದುಕಿನ ಸುರಕ್ಷಿತೆಗೆ ಕಾನೂನಿನ ಜ್ಞಾನ ಅವಶ್ಯ

ಗದಗ 05: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಪೂಜ್ಯಭಾವನೆಯಿಂದ ಕಾಣುತ್ತೇವೆಯಾದರೂ ನಾಲ್ಕು ಗೋಡೆಗಳ ಮಧ್ಯೆ ಬಂಧಿತಳಾಗಿ ಉಸಿರು ಕಟ್ಟಿದ ವಾತಾವರಣದಲ್ಲಿ ಬದುಕುತ್ತಿದ್ದಾಳೆ. ರಾಜಾರಾಮ್ ಮೋಹನರಾಯರಂತಹ ಸಮಾಜ ಸುಧಾರಕರಿಂದಾಗಿ ಸತಿಪದ್ಧತಿ, ಬಾಲ್ಯವಿವಾಹ ಮುಂತಾದ ಅಮಾನುಷ ಪದ್ಧತಿಗಳಿಗೆ ಪರಿಹಾರ ದೊರೆತರೂ ಬದುಕಿನ ಸುರಕ್ಷಿತೆಗೆ ಅವರಿಗಾಗಿರುವ ಆಸ್ತಿಹಕ್ಕು ಶಿಕ್ಷಣದ ಹಕ್ಕು ಸ್ವಾತಂತ್ರ್ಯ ಸಮಾನತೆಯ ಹಕ್ಕು ಮುಂತಾದ ಕಾನೂನಿನ ಜ್ಞಾನ ಅವಶ್ಯ ಎಂದು ಗದಗ ಸೀನಿಯರ್ ಟಿವಿಜನ್ ಪ್ರಿನ್ಸಿಪಾಲ ಸಿವಿಲ್ ಜಡ್ಜ್ ಆಗಿರುವ ಶ್ರೀ ಎಸ್.ಜಿ.ಸಲಗರೆ ಹೇಳಿದರು. 

ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಭಾಗಿತ್ವ, ರಾಷ್ಟ್ರೀಯ ಮಹಿಳಾ ಆಯೋಗದ ಪ್ರಾಯೋಜಕತ್ವ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಸರಕಾರಿ/ಅರೆಸರಕಾರಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದಿ. 05ರಂದು 'ಅಪರಾಧ ಮತ್ತು ನಾಗರಿಕ ಕಾನೂನು' ವಿಷಯ ಕುರಿತು ಆಯೋಜಿದ್ದ ಒಂದು ದಿನದ ಕಾನೂನು ತಿಳುವಳಿಕಾ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಅವುಗಳ ವಿತರಣೆಯಲ್ಲಿ ಯಾವುದೇ ಜಾತಿ, ಧರ್ಮ, ಮತ, ಪಂತ, ವಸತಿ ಪ್ರದೇಶ ಹಾಗೂ ಲಿಂಗ ತಾರ್ಯತಮ್ಯ ಮಾಡುವಂತಿಲ್ಲ. ಕಾರಣ ತಮಗಾಗುವ ಅನ್ಯಾಯಗಳನ್ನು ಎದುರಿಸುವಲ್ಲಿರುವ ಸಾಮಾಜಿಕ ರಾಜಕೀಯ ಹಾಗೂ ಆಥರ್ಿಕವಾಗಿರುವ ಸಮಾನತೆಯ ನಾಗರಿಕ ಹಕ್ಕುಗಳ ಬಗೆಗೆ ತಿಳಿಸಿದರು. 

ಎರಡನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಗದುಗಿನ ವಕೀಲರಾದ ಶ್ರೀಮತಿ ಸುಪಣರ್ಾ ಬ್ಯಾಹಟ್ಟಿ ಇವರು ಮಹಿಳಾ ದೌರ್ಜನ್ಯ ಸಮಸ್ಯೆಗಳು ಮತ್ತು ಕಾನೂನಾತ್ಮಕ ಪರಿಹಾರ ಕುರಿತು ಮಾಹಿತಿ ತಿಳಿಸುತ್ತಾ ಮಹಿಳೆಯು ಹುಟ್ಟಿದ ಮತ್ತು ಗಂಡನ ಮನೆಯಲ್ಲಿ ಎದುರಿಸುವ ಸಮಸ್ಯೆಗಳು ಭ್ರೂಣಹತ್ಯೆ, ಶಿಶುಹತ್ಯೆ, ವರದಕ್ಷಿಣೆ ಸಮಸ್ಯೆ, ವಿವಾಹ ಮುರೂಗಡೆ ಸಮಸ್ಯೆ, ಲೈಂಗಿಕ ಕಿರುಕುಳ, ಅತ್ಯಾಚಾರ, ಅನ್ಯಾಯ, ಶೋಶಣೆಯಂತಹ ಅಮಾನವೀಯ ದೌರ್ಜನ್ಯಗಳಿಗೆ ಬಲಿಯಾಗುವುದನ್ನು ತಡೆಗಟ್ಟಲು ಇರುವಂತಹ ಕಾನೂನಿನ ಮಾಹಿತಿಯನ್ನು ತಮ್ಮ ಸೇವಾ ಅನುಭವದೊಂದಿಗೆ ತಿಳಿಸಿದರು.

ಮೂರನೇ ಗೋಷ್ಠಿಯಲ್ಲಿ ಗದುಗಿನ ಕೆ.ಎಸ್.ಆರ್.ಡಿ.ಪಿ. ವಿಶ್ವವಿದ್ಯಾಲಯದ ಪ್ರಭಾರಿ ಉಪಕುಲಪತಿಗಳಾದ ಡಾ.ಸುರೇಶ ನಾಡಗೌಡರ ಸಂಪನ್ಮಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾಥರ್ಿಗಳನ್ನು ಕುರಿತು ಸರಕಾರದ ಉದ್ಯೋಗವನ್ನು ಎಲ್ಲರೂ ಪಡೆಯಲು ಸಾಧ್ಯವಿಲ್ಲ. ಸ್ವಂತ ಉದ್ಯೋಗವನ್ನು ಮಾಡಿಯೂ ಉತ್ತಮ ಸಾಧನೆ ಮಾಡಲು ಅವಕಾಶವಿದರ ಅದಕ್ಕಿರುವ ಸರಕಾರ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ವಿನಾಯಕ ಕಟ್ಟೀಮನಿ ಹಾಗೂ ಲಿಖಿತಾ ವ್ಹಿ ಗೌಡಾ ಕಾರ್ಯಕ್ರಮ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

ಕುಮಾರಿ ಲಿಖಿತಾ ವ್ಹಿ ಗೌಡಾ ಪ್ರಾಥರ್ಿಸಿದರು. ಪ್ರಾಚಾರ್ಯರಾದ ಪ್ರೊ.ಎಂ.ಬಿ.ಕೊಳವಿ ಸರ್ವರನ್ನು ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ.ಎ.ಕೆ.ಮಠ ಅತಿಥಿಗಳನ್ನು ಪರಿಚಯಿಸಿದರು. ನ್ಯಾಕ್ ಸಂಯೋಜಕರಾದ ಡಾ. ಸಂಧ್ಯಾ ಕುಲಕಣರ್ಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ವೀಣಾ. ಈ ಕಾರ್ಯಕ್ರಮ ನಿರೂಪಿಸಿದರು. ವೀಣಾ ತಿಲರ್ಾಪೂರ ಗೌರಾ ಯಳಮಲಿ ವ್ಹಿ.ಸಿ.ಚಿನ್ನೂರ ಮತ್ತು ಪಿ.ಜೆ.ಕಟ್ಟೀಮನಿ ತಾಂತ್ರಿಕ ಗೋಷ್ಠಿಗಳನ್ನು ನಿರ್ವಹಿಸಿದರು. ಕೊನೆಯಲ್ಲಿ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಹೆಣ್ಣುಭ್ರೂಣಹತ್ಯೆ ಮಾಡಬೇಡಿ ಎಂಬುದನ್ನು  ಮೂಕಾಭಿನಯದ ಮೂಲಕ ಪ್ರದಶರ್ಿಸಿ ಮಗಳು ಹೆಂಡತಿ ಮಾತೆಯಾದ ಹೆಣ್ಣನ್ನು ಗೌರವಿಸಿ ರಕ್ಷಿಸಿ ಎಂಬ ಸಂದೇಶ ನೀಡಿದರು.   

ಈ ಕಾರ್ಯಕ್ರಮದಲ್ಲಿ ಅಸಂಘಟಿತ ವಲಯದ ಸುಮಾರು 30 ಜನ ಮಹಿಳಾ ಕಾಮರ್ಿಕರು ಹಾಗೂ 150 ಜನ ವಿದ್ಯಾಥರ್ಿಗಳು ಪಾಲ್ಗೊಂಡು ಪ್ರಯೋಜನ ಪಡೆದರು ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.ಐಕ್ಯೂಎಸಿ ಸಂಯೋಜಕರಾದ ಡಾ.ಎ.ಕೆ.ಮಠವರು ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವವರಿಗೂ ವಂದಿಸಿದರು.