ಬಾಗಲಕೋಟೆ: ಕಾನೂನು ಅರಿವು ತಿಳುವಳಿಕೆ ಇಲ್ಲದಾಗ ಶಿಕ್ಷೆ ಖಂಡಿತ. ಸಾಮಾನ್ಯವಾಗಿ ಕಾನೂನಿನ ಅರಿವು ಎಲ್ಲರಿಗೂ ಅವಶ್ಯಕ. ಇದನ್ನು ಯುವಜನಾಂಗಕ್ಕೆ ನೀಡುವುದರ ಮೂಲಕ ಜಾಗೃತರಾಗಿ ಕಾನೂನು ಉಲ್ಲಂಘನೆ ತಡೆಯನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹೇಮಲತಾ ಹುಲ್ಲೂರು ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಬಿ.ವ್ಹಿ.ವ್ಹಿ.ಎಸ್. ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಸಾಗಾಣಿಕೆ ಹಾಗೂ ವಾಣಿಜ್ಯಕ ಲೈಂಗಿಕ ಶೋಷಣೆ ಸಂತ್ರಸ್ತರ ಯೋಜನೆ 2015 ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಳ್ಳ ಸಾಗಾಣಿಕೆಯಲ್ಲಿ ಯಾವುದೇ ವಯೋಮಾನದ ವ್ಯಕ್ತಿಗಳು ಬಲಿಪಶುಗಳಾಗುತ್ತಾರೆ. ಇದು ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ನಿರಂತರ ಕಾರ್ಯ ನಿರ್ವಹಿಸುತ್ತದೆೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಮ್.ಪಿ.ಚಂದ್ರಿಕಾ ಇವರು ಮಾತನಾಡಿ ಕಾನೂನು ಅರಿವು ಎಲ್ಲರಿಗೂ ಅವಶ್ಯಕ. ಅವರವರ ದೇಶಕ್ಕೆ ಅನುಗುಣವಾದ ಅವರದೇ ಆದ ಕಾನೂನುಗಳಿವೆ. ಅವುಗಳನ್ನು ಪ್ರತಿಯೊಬ್ಬ ವ್ಯಕ್ತಿ ಅರಿತುಕೊಂಡಿರಬೇಕು ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಗೋಪಾಲಕೃಷ್ಣ ದೇಸಾಯಿ ಸಾಮಾಜಿಕ ಕಾರ್ಯಕರ್ತರು ಬಾಗಲಕೋಟ, ಇವರು ಮಾತನಾಡಿ ಕಾನೂನು ಏಕೆ ಬೇಕು? ಅದರ ಅವಶ್ಯಕತೆ ಇದೆಯೇ ? ಎನ್ನುವ ಮೂಲಕ ಗೌರವಯುತವಾದ, ಶಿಸ್ತುಬಧ್ಧವಾದ, ಜೀವನ ಸಾಗಿಸಲು ಕಾನೂನು ಬೇಕು.
ಭ್ರೂಣ ಗರ್ಭದಲ್ಲಿ ಇರುವಾಗಲೇ ಕಾನೂನು ಪ್ರಾರಂಭವಾಗುವುದು. ಇದು ವ್ಯಕ್ತಿಯ ಜೀವಿತದ ಕೊನೆಯ ಹಂತದವರೆಗೆ ಪ್ರಭಾವ ಬೀರುವುದು ಎಂದರು. ಇನ್ನೊರ್ವ ಉಪನ್ಯಾಸಕರಾಗಿ ಆಗಮಿಸಿದ ಜೆ.ಜೆ. ಕುಲಕಣರ್ಿ ವಕೀಲರು ಬಾಗಲಕೋಟ ಇವರು ಗ್ರಾಹಕರ ಹಿತರಕ್ಷಣೆ ಕಾಯ್ದೆಯ ಬಗ್ಗೆ ಮಾತನಾಡಿದರು.
ಅದರಂತೆ ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ಎಮ್.ಎ.ತೆಲಸಂಗ ವಕೀಲರು ಬಾಗಲಕೋಟ ಇವರು ಮಾತನಾಡುತ್ತ, ಮಹಿಳೆಯರಿಗೆ, ಮಕ್ಕಳಿಗೆ, ಕಾಮರ್ಿಕರಿಗೆ ಹೇಗೆ ಕಾನೂನುಗಳಿವೆಯೋ ಹಾಗೆಯೇ 18 ವರ್ಷ ಒಳಗಿರುವ ಮಕ್ಕಳು ಅಪರಾಧ ಮಾಡಿದರೆ ಬಾಲನ್ಯಾಯಿಕ ಕಾಯ್ದೆಯು ಅವರಿಗೆ ತರಬೇತಿ ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಾಗೂ ಅಕ್ಕಮಹಾದೇವಿ ಮಹಿಳಾ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಜೆ. ಒಡೆಯರ ಇವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಆಸೆ ದುರಾಸೆಗೆ ಬಲಿಯಾಗಿ ಕಾನೂನು ಉಲ್ಲಂಘನೆಯಾಗುತ್ತಿದೆ.
ಕಾನೂನು ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ ಎಂದರು.ಈ ಸಮಾರಂಭದಲ್ಲಿ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.ಎಸ್.ಕೆ.ಹಿರೇಮಠ ನಿರೂಪಿಸಿದರು. ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು. ಡಾ.ಎಸ್.ಎಮ್.ಸಂಗಮ ಸ್ವಾಗತಿಸಿದರು. ಕೆ.ವಿ.ಜುಕ್ತಿಮಠ ವಂದಿಸಿದರು.