ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ
ಬ್ಯಾಡಗಿ 27: ತಾಲೂಕು ಆಡಳಿತ ತಾಲೂಕು ಪಂಚಾಯತ್ ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಗಳ ಅಶ್ರಯದಲ್ಲಿ ಶೀಡೆನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಿರೇನಂದಿಹಳ್ಳಿ ಗ್ರಾಮ ದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೇಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಆದ ಆಯಿಶ್, ಮುಸ್ತಾಕ್, ಬ್ಯಾಡಗಿಯವರು ವಹಿಸಿ ಮಾತನಾಡಿದರು ನಮ್ಮ ಸಮಾಜದಲ್ಲಿ ಈಗಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಾಂಗದವರ ಮೇಲೆ ದೌರ್ಜನ್ಯದಂತ ಘಟಿನೆಗಳು ನಡೆಯುತ್ತಿವ.
ೆ ಇವುಗಳನ್ನು ತಡೆಗಟ್ಟಲು ಸರಕಾರದವರು ಅರಿವು ಮೂಡಿಸುವ ಕಾರ್ಯಗಾರ ನಡೆಸುತ್ತಿದ್ದು ಈ ಕಾರ್ಯಕ್ರಮದ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕಿದೆ ಎಂದರು ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದೊಡ್ಡ ಬಸವರಾಜ ಮಾತನಾಡಿ ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೇ ಮಾಡಬೇಕು ಅನ್ನುವದು ಸರಕಾರದ ಕನಸು ಈ ನಿಟ್ಟಿನಲ್ಲಿ ಸರಕಾರ ಅಂತರ್ಜಾತಿ ವಿವಾಹಗಳು ನಡೆಯುತ್ತಿದ್ದು ಅವುಗಳಿಗೆ ನಮ್ಮ ಇಲಾಖೆವತಿಯಿಂದ ಪರಿಹಾರ ನೀಡುತ್ತಿದ್ದು ದೌರ್ಜನ್ಯಕ್ಕೆ ಒಳಗಾದವರಿಗೆ ದೌರ್ಜನ್ಯ ಮಾಡಿದವರ ವಿರುದ್ಧ, ಕೇಸ್ ದಾಖಲೆ ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನಮ್ಮ ಇಲಾಖೆ ಪರಿಹಾರ ನೀಡುವದು ಇದರ ಸದುಪಯೋಗ ಪಡೆದುಕೊಳ್ಳಿ. ಇಲಾಖೆಯ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು,ಈ ವೇಳೆ ಹಿರಿಯ ನ್ಯಾಯವಾದಿ ಭಾರತಿ ಕುಲಕರ್ಣಿ ಮಾತನಾಡಿ ದೌರ್ಜನ್ಯ ಕಾನೂನುಗಳ ಬಗ್ಗೆ ಮಾಹಿತಿ ನೀಡಿ ಈ ಭೂಮಿ ಮೇಲೆ ಹೆಣ್ಣು ಗಂಡು ಎಂಬ ಎರಡು ಜಾತಿಗಳು ಇದ್ದು ಇವುಗಳ ಬಗ್ಗೆ ಕಠಿಣ ಕಾಯ್ದೆಗಳು ಇದ್ದು ಜಾತಿ ನಿರ್ಮೂಲನೆ, ಮಾಡಬೇಕು, ಎಂದು ವಿಶಿಷ್ಟ ಅರಿವು ಮೂಡಿಸಿ ಜಾಗೃತಿ ಮೂಡಿಸುವದು ಸರಕಾರದ ಕೆಲಸವಾಗಿದೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಅಧ್ಯಕ್ಷರಾದ ಗಂಗಮ್ಮ ಓಲೇಕಾರ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಾರದಾ ಕುದರಿ.ಸಮಾಜ ಕಲ್ಯಾಣ ಇಲಾಖೆ ಕಛೇರಿ ವ್ಯವಸ್ಥಾಪಕಕುಲಕರ್ಣಿ ಇನ್ನೂ ಅನೇಕ ಮುಖಂಡರು ಹಾಜರಿದ್ದರು