ರಾಣೇಬೆನ್ನೂರು12: ಸಮಾಜದಲ್ಲಿ ಬದುಕಿ-ಬಾಳುವ ಪ್ರತಿಯೊಬ್ಬರೂ ಸಮಾನತೆ ಸಾಧಿಸಲು ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕುಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಲು ಮುಂದಾಗಬೇಕಾದ ಅಗತ್ಯವಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಬಿ.ಜಿ.ಪ್ರಮೊದ ಹೇಳಿದರು.
ಅವರು ಗುರುವಾರ ಇಲ್ಲಿನ ಹೊಸನಗರದ ಬಾಲಮಂದಿರ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬಾಲಮಂದಿರ ಸಂಯುಕ್ತವಾಗಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಶಿಕ್ಷಣದ ಹಕ್ಕು ಕಾಯ್ದೆ 2009ರ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿಯೇ ಭಾರತದ ಕಾನೂನು ಸಂವಿಧಾನವು ಅತ್ಯಂತ ಪ್ರಭಲವಾಗಿದೆ. ಹಕ್ಕು ಪಡೆಯುವುದು ಎಷ್ಟು ಮುಖ್ಯವೂ ಅದನ್ನು ಕಾನೂನಿನ ರೀತಿಯಲ್ಲಿ ಹಂಚುವುದು ಅಷ್ಟೇ ಮುಖ್ಯವಾಗಿದೆ ಎಂದು ಸಂವಿಧಾನ ಕುರಿತು ವಿಶ್ಲೇಷಿಸಿ ಮಾತನಾಡಿದ ನ್ಯಾಯಾಧೀಶರು ಅನೇಕ ನ್ಯೂನತೆಗಳಿಂದಾಗಿ ಬಾಲ ಮಕ್ಕಳು ಇಂದು ಕಾನೂನಿನ ರಕ್ಷಣೆಯಲ್ಲಿದ್ದಾರೆ.
ಆದರೆ, ಅವರಿಗೆ ದೊರೆಯಬಹುದಾದ ಎಲ್ಲರೀತಿಯ ಹಕ್ಕುಗಳನ್ನು ಸಮರ್ಪಕವಾಗಿ ದೊರಕಿಸಲು ಸಕರ್ಾರ ಮತ್ತು ಸಾರ್ವಜನಿಕರು, ಸಂಘ-ಸಂಸ್ಥೆಗಳು ಮುಂದಾಗಬೇಕಾದ ಅಗತ್ಯವಿದೆ ಎಂದರು.
ಬಾಲವಿಕಾಸ ಅಕಾಡೆಮಿ ಸದಸ್ಯ ಜೆ.ಎಂ.ಮಠದ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಚಿನ್ನಪ್ಪನವರ, ಉಪಾಧ್ಯಕ್ಷ ಎಂ.ಎಸ್.ರೊಡ್ಡನವರ ಕಾರ್ಯದಶರ್ಿ ಕುಮಾರ ಎಸ್.ಏಳೆಹೊಳೆ, ಸೇರಿದಂತೆ ಮತ್ತಿತರರು ಮಾತನಾಡಿದರು. ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009 ಕುರಿತು ನ್ಯಾಯವಾದಿ ಅನುಪಮಾ ಎಸ್.ಕಣವಿ ಅವರು ವಿಶೇಷ ಉಪನ್ಯಾಸ ನೀಡಿದರು.
ಬಾಲಮಂದಿರದ ರಾಜೇಶ ಸಂಗಡಿಗರು ಪ್ರಾಥರ್ಿಸಿದರು, ಪರಿವೀಕ್ಷಣಾಧಿಕಾರಿ ಜಯಶ್ರೀ ಪಾಟೀಲ ಸ್ವಾಗತಿಸಿದರು, ಚೈತ್ರಾ ಜಾವಗಲ ನಿರೂಪಿಸಿ, ಸಿದ್ಧಪ್ಪ ಬಸಪ್ಪಳವರ ವಂದಿಸಿದರು.