ನಕಲಿ ಪತ್ರಕರ್ತರ ಮೇಲೆ ಕಾನೂನುಕ್ರಮಕ್ಕೆ ಆಗ್ರಹ

ಲೋಕದರ್ಶನ ವರದಿ

ಕಾಗವಾಡ 17: ನಕಲಿ ಪತ್ರಕರ್ತರ ಹಾವಳಿ ಎಲ್ಲೆಡೆ ಹೆಚ್ಚಿಸಿದೆ. ಇವರಿಂದ, ಸಾರ್ವಜನಿಕರಿಗೆ ಹೆದರಿಸಿ, ಬೆದರಿಸಿ ಆರ್ಥಿಕ ವ್ಯವಹಾರ ಮಾಡುತ್ತಿದ್ದರಿಂದ ಅಧಿಕೃತ ಪತ್ರಕರ್ತರಿಗೆ ಸಮಾಜದಲ್ಲಿ ಮುಜಗರವಾಗುತ್ತಿದೆ.ಇದರಿಂದ ಕಾಗವಾಡ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪೊಲೀಸ್ ಇಲಾಖೆ, ತಹಸೀಲ್ದಾರ, ಬಿಇಒ, ಸೇರಿದಂತೆ ಇನ್ನೀತರ ಇಲಾಖೆಗೆ ನಕಲಿ ಪತ್ರಕರ್ತರ ಮೇಲೆ ನಿಗಾಹಿಯಿಟ್ಟು ಕ್ರಮ ಜರುಗಿಸಿರಿ ಎಂದು ಮನವಿ ಅರ್ಪಿಸಿದರು.

ಮಂಗಳವಾರ ರಂದು ಕಾಗವಾಡ ಪೊಲೀಸ್ ಠಾಣಾ ಮುಖ್ಯಸ್ಥ ಎಂ.ಎಸ್.ಕರಜಿಮಠ, ಕಾಗವಾಡ ಉಪತಹಸೀಲ್ದಾರ ವಿಜಯ ಚೌಗುಲೆ, ಕಾಗವಾಡ ಬಿಇಒ ಎ.ಎಸ್.ಜೋಡಗೇರಿ, ಸೇರಿದಂತೆ ಇನ್ನೀತರ ಇಲಾಖೆ ಅಧಿಕಾರಿಗಳು ಮನವಿ ಅರ್ಪಿಸಿದರು.

ಮನವಿಯಲ್ಲಿ ಕಾಗವಾಡ ತಾಲೂಕಿನಲ್ಲಿ ಕನ್ನಡ, ಮರಾಠಿ ಪತ್ರೀಕೆಗಳ ವರದಿಗಾರರು, ಟಿವಿ ಮಾಧ್ಯಮದ ವರದಿಗಾರರು ಇಲ್ಲಿಗೆ ಸೇವೆ ನೀಡುತ್ತಿದ್ದಾರೆ. ಆದರೆ, ಇದೇ ತಾಲೂಕಿನಲ್ಲಿ ಕೆಲವರು ತಾವು ವರದಿಗಾರರು, ಟಿವಿ ಚೈನಲ್ ಪತ್ರಕರ್ತರೆಂದು ಹೇಳುತ್ತಾ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದು, ಮೋಸ ಮಾಡುತ್ತಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದು ಬಂದಿದೆ. ಅಂತಹ ಯಾವುದೇ ದಾಖಲೆ ಇಲ್ಲದೇ ಅಥವಾ ಸುಳ್ಳು ದಾಖಲೆ ಪಡೆದುಕೊಂಡು ತಾವು ಪತ್ರಕರ್ತರೆಂದು ಹೇಳುತ್ತಾ ವಂಚಿಸಲು ಪ್ರಯತ್ನಿಸುತ್ತಿದ್ದಾರೆ.ಇಂಥವರನ್ನು ಕಂಡುಹಿಡಿದು ತಾವು ಕ್ರಮ ಜರುಗಿಸಬೇಕು.

ನಕಲಿ ಪತ್ರಕರ್ತರಿಂದ ಕೆಲವರಿಗೆ ತೊಂದರೆಯಾಗುತ್ತಿದ್ದು, ಅಧಿಕೃತ ಪತ್ರಕರ್ತರಿಗೆ ಇದರಿಂದ ಮುಜಗರವಾಗುತ್ತಿದೆ.ಇವರ ಮೇಲೆ ಕ್ರಮ ಜರುಗಿಸಿರಿ ಮತ್ತು ಕೆಲವರು ತಮ್ಮ ವಾಹನಗಳ ಮೇಲೆ ನೇರವಾಗಿ 'ಪ್ರೇಸ್ ಎಂದು ಸ್ಟೀಕರ್ ಹಚ್ಚಿಕೊಂಡು ಸಂಚಾರಿಸುತ್ತಿರುವ ನಕಲಿ ಪತ್ರಕರ್ತರ ಮೇಲೆ ಕ್ರಮ ಜರುಗಿಸಿರಿ ಎಂದುಬೇಡಿಕೆ ಮಂಡಿಸಿದರು.

ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ಸುಕುಮಾರ ಬನ್ನೂರೆ, ಪ್ರಭಾಕರ ಗೊಂಧಳಿ, ಕುಮಾರ ಪಾಟೀಲ, ರಾಜು ಇಂಗಳಗಾಂವೆ, ಸುರೇಶ ಕಾಗಲಿ, ರಂಗನಾಥ ದೇಶಿಂಗಕರ, ಲಕ್ಷ್ಮಣ ಸೂರ್ಯವಂಶಿ, ಮುರಗೇಶ ಗಸ್ತಿ, ಶಿವಾಜಿ ಪಾಟೀಲ, ರಾಜಕುಮಾರ ಚೋಳಕೆ, ಸೇರಿದಂತೆ ಅನೇಕರು ಇದ್ದರು.