ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ

ಶಿಗ್ಗಾವಿ17 : ಸ್ವಾಮಿ ವಿವೇಕಾನಂದರು ನಮ್ಮ ದೇಶದ ಕೀರ್ತಿ  ಪತಾಕೆಯನ್ನು ಜಗತ್ತಿಗೆ ಪಸರಿಸಿದವರು ಹಾಗೂ ದೇಶದ ಯುವ ಸಮೂಹಕ್ಕೆ ಸ್ಫೂರ್ತಿ ದಾಯಕರು. ಅವರ ತತ್ವಾದರ್ಶಗಳನ್ನು ಅರಿತು ಅಳವಡಿಸಿಕೊಂಡು, ದೈಹಿಕ ಮಾನಸಿಕವಾಗಿ ಪ್ರಭಲರಾಗಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ವಿಜಯಕುಮಾರ ಕನ್ನೂರ ಸಲಹೆ ನೀಡಿದರು.

ಪಟ್ಟಣದ ಜೆ.ಎಮ್.ಎಪ್.ಸಿ. ನ್ಯಾಯಾಲಯದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಂಪತ್ತು ಯುವಶಕ್ತಿಯಾಗಿದ್ದು ಯುವ ಶಕ್ತಿ ಭಲಿಷ್ಟವಾಗಲು ಸ್ವಾಮಿ ವಿವೇಕಾನಂದರ ನುಡಿಗಳು ತುಂಬಾ ಅವಶ್ಯವಾಗಿವೆ. ಒತ್ತಡದ ಬದುಕಿನಲ್ಲಿ ಜ್ಞಾನ, ವಿದ್ಯ, ಬುದ್ದಿ, ಶುಚಿತ್ವ, ಶೃದ್ಧೆ, ಗುರಿ, ತುಂಬಾ ಮುಖ್ಯವಾಗಿದ್ದು, ಅದರೊಂದಿಗೆ ದೇಶದ ಸಂವಿಧಾನ ನಮ್ಮ ಹಕ್ಕು ಕರ್ತವ್ಯಗಳನ್ನು ಅರಿತುಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ  ದಿವಾಣಿ ನ್ಯಾಯಾದೀಶರು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದಶರ್ಿಗಳಾದ ಶ್ರೀದೇವಿ ದರಬಾರೆ ಮಾತನಾಡಿ, ದೇಶದಲ್ಲಿ ವೃದ್ದರು ಮತ್ತು ಮಕ್ಕಳು ಒಂದೆ ಆಗಿದ್ದು,  ದೇಶದ ಭಲಿಷ್ಟತೆಯಲ್ಲಿ ಯುವ ಸಮೂಹದ ಪಾತ್ರ ತುಂಬಾ ಪ್ರಮುಖವಾಗಿದೆ. ಸ್ವಾಮಿ ವಿವೇಕಾನಂದರ ತತ್ವಾದರ್ಶ ನುಡಿಗಳನ್ನು ಅರಿತು ಯುವ ಶಕ್ತಿ ದೇಶಕ್ಕೆ ಯಾವ ರೀತಿ ಶಕ್ತಿ ನೀಡಬೇಕು ಎಂಬುದನ್ನು ಚಿಂತಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

 ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಹಿರಿಯ ನ್ಯಾಯವಾದಿಗಳಾದ ಜಿ.ಎಸ್.ಅಂಕಲಕೋಟಿ, ಎ.ಎ.ಗಂಜೆನವರ, ಎಸ್.ಕೆ.ಅಕ್ಕಿ, ಕಾರಡಗಿ, ವಿ.್ಹಸಿ ಪಾಟೀಲ. ಕಾನೂನು ಸಲಹೆಗಳನ್ನು ನೀಡಿದರು.

ನ್ಯಾಯವಾದಿಗಳು ಕಾನೂನು ಸಲಹೆಗಾರರಾದ ಎಮ್.ಜಿ.ವಿಜಾಪೂರ, ಸಿ.ಎನ್.ಬಡ್ಡಿ ಸೇರಿದಂತೆ ನ್ಯಾಯವಾದಿಗಳು, ನ್ಯಾಯಾಲಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ನ್ಯಾಯವಾದಿ ಬಿ.ಪಿ.ಗುಂಡಣ್ಣವರ ಕಾರ್ಯಕ್ರಮ ನಿರ್ವಹಿಸಿದರು.