ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ

ಶಿಗ್ಗಾವಿ 07ಃ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಮ್ಮ ಸಂವಿಧಾನ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ಎಂದು ದಿವಾಣಿ ನ್ಯಾಯಾಧೀಶರಾದ ಶ್ರೀದೇವಿ ದರಬಾರೆ ಸಲಹೆ ನೀಡಿದರು.

    ತಾಲೂಕಿನ ಗಂಜೀಗಟ್ಟಿ ಗ್ರಾಮದ ಶ್ರೀ ಚರಮೂತರ್ೇಶ್ವರ ಮಠದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆ, ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ನುರಿತ ನ್ಯಾಯವಾದಿಗಳು ಹಾಗೂ ಕಾನೂನು ಸಲಹೆಗಾರರು ನೀಡುವ ಉಪನ್ಯಾಸದ ಮೂಲಕ, ನಮ್ಮ ದೇಶ ನಮಗೆ ಕೊಟ್ಟಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಇತರರಿಗೂ ತಿಳಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಬೇಕು ಎಂದು ಹೇಳಿದರು.

    ಸಹಾಯಕ ಸಕರ್ಾರಿ ಅಭಿಯೋಜಕರಾದ ಜಿ.ಕೆ.ಕುಡರ್ಿಕೇರಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶಕ್ಕೆ ಶಕ್ತಿಯ ರೂಪದಲ್ಲಿ ಸಂವಿಧಾನವಿದೆ ಎಂದರು. ಹಿರಿಯ ನ್ಯಾಯವಾದಿಗಳಾದ ಜಿ.ಎಸ್.ಅಂಕಲಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನ್ಯಾಯವಾದಿ ವ್ಹಿ.ಸಿ ಪಾಟೀಲ ವಿದ್ಯಾಥರ್ಿಗಳಿಗೆ ಸವಿಸ್ತಾರವಾಗಿ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು, ದೇಶಕ್ಕಾಗಿ ನಮ್ಮ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು.

    ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಸುಮಂಗಲಾ ದುರ್ಗದ ಮಾತನಾಡಿ, ಶಿಕ್ಷೆಗಳು ಇವೆ ಎಂದು ಗೊತ್ತಿದ್ದರೂ ಅಪರಾಧಗಳು ಜರುಗುತ್ತಿವೆ ಎಂದರೆ ಅದು ಕಾನೂನು ಅರಿವಿನ ಕೊರತೆಯಾಗಿರಬಹುದು. ಹಾಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದೆ. ನಮ್ಮ ಶಾಲೆಯಲ್ಲಿ ಆಗಾಗ ಇಂತಹ ಕಾರ್ಯಕ್ರಮ ಆಯೋಜಿಸುವಂತೆ ಕಾನೂನು ಸೇವಾ ಸಮಿತಿಗೆ ವಿನಂತಿಸಿದರು.

   ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಮ್.ಆಯ್.ಗೋಣೆಪ್ಪನವರ, ಸಿ.ಎನ್.ಬಡ್ಡಿ, ಜಿ.ಎಸ್.ಅಂಕಲಕೋಟಿ, ಜಿ.ಕೆ.ಕುಡರ್ಿಕೇರಿ, ವ್ಹಿ.ಸಿ.ಪಾಟೀಲ, ಎಮ್.ಜಿ.ವಿಜಾಪೂರ, ಸಿ.ಎಮ್.ಹರಕುಣಿ, ಶಿಕ್ಷಣ ಇಲಾಖೆಯ ಎಸ್.ವಾಯ್.ಕಬನೂರ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ  ವಾರ್ಡನ್ ವಿದ್ಯಾ ಅರಳಿಕಟ್ಟಿ, ಶಿಕ್ಷಕರಾದ ಪರಶುರಾಮ ಹಿರೂಲಾಲ, ಚಂದ್ರಶೇಖರ, ಶಿಲ್ಪಾ ಪಾಟೀಲ, ಶಿವಾನಿ, ಜ್ಯೋತಿ ಕಾಂಬಳೆ, ನ್ಯಾಯಾಲಯದ ಸಿಬ್ಬಂದಿಗಳು ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಂತೋಷ ಸ್ವಾಗತಿಸಿದರು. ರಾಜು ದುಂಡಪ್ಪನವರ ನಿರೂಪಿಸಿದರು.