ಲೋಕದರ್ಶನ ವರದಿ
ಮುನವಳ್ಳಿ 05: ದಿ. 4ರಂದು ಪಟ್ಟಣದ ಪೋಲಿಸ್ ಉಪಠಾಣೆಯಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ತಾಲೂಕಾ ವಕೀಲರ ಸಂಘ, ಪೋಲಿಸ್ ಇಲಾಖೆ,ಅರಣ್ಯ ಇಲಾಖೆ ಹಾಗೂ ಜೈಂಟ್ಸ ಗ್ರುಪ್ ಆಫ್. ಮುನವಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಜರುಗಿತು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸಿ. ವೀರಭದ್ರಯ್ಯ ಸಮಾಜದಲ್ಲಿ ಹಮ್ಮಿಕೊಳ್ಳುವ ವಿಶೇಷವಾದ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜದ ಪರಿವರ್ತನೆಗೆ ಕಾರಣವಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಕಾನೂನಿನ ಬಗ್ಗೆ ಕನಿಷ್ಠ ಅರಿವನ್ನು ಹೊಂದಿರಬೇಕು. ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ರಾಜಿ ಸಂದಾನ ಮಾಡಿಕೊಳ್ಳಬೇಕು. ರಾಜಿ ಸಂದಾನದ ಪ್ರಯೋಜನಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು.
ಹಾಗೂ ಪರಿಸರ ಕಾಳಜಿ ಬಗ್ಗೆ ಕಾನೂನು ಜ್ಞಾನ ಎಲ್ಲರು ತಿಳಿದುಕೊಳ್ಳಬೇಕು ಎಂದರು.
ಪಿ.ಎಸ್.ಐ. ಪಿ.ಎಸ್.ಪೂಜೇರ ಮಾತನಾಡಿ ಪೋಲಿಸ ದೂರು ಹಾಗೂ ಪ್ರಾಧಿಕಾರದ ನಿಯಮಗಳ ಬಗ್ಗೆ ಹಾಗೂ ನ್ಯಾಯವಾದಿ ಎಂ.ಎ. ಅಂಗಡಿ ಸಂತ್ರಸ್ಥರ ಪರಿಹಾರ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ವಾಯ್.ಪಿ.ರಾಮಜಾರ ವಹಿಸಿದ್ದರು. ಅತಿಥಿಗಳಾಗಿ ನ್ಯಾಯಾಧೀಶರಾದ ಪಿ.ಆರ್.ಯೋಗೇಶ, ಹೇಮಶ್ರೀ ಡಿ. ಹರೀಶ ಜಿ. ಸಹಾಯಕ ಸಕರ್ಾರಿ ಅಭಿಯೋಜಕಿ ಸವಿತಾ ಪಾಟೀಲ. ಎಂ.ಎ. ಮುತ್ತಿನ, ಎಸ್.ಎಸ್.ಹಿರೇಮಠ, ಡಾ. ಎಂ.ಬಿ.ಅಷ್ಟಗಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಸ್ವಾಗತವನ್ನು ನ್ಯಾಯವಾದಿ ಮೋಹನ ಸವರ್ಿ ನಿರೂಪಣೆಯನ್ನು ನ್ಯಾಯವಾದಿ ಎಸ್.ಎಸ್.ಮಾನೆ ವಂದನಾರ್ಪಣೆಯನ್ನು ರಮೇಶ ಗಂಗಣ್ಣವರ ಮಾಡಿದರು.