ಬೆಳಗಾವಿ 25: ಕೆಎಲ್‌ಎಸ್ ರಾಜಾ ಲಖಮ್‌ಗೌಡ ಕಾನೂನು ಮಹಾವಿದ್ಯಾಲಯದ ವತಿಯಿಂದ ಕಾನೂನು ನೆರವು ಸೇವೆಗಳ ಶಿಬಿರವನ್ನು ಏ.22ರಿಂದ 24ರವರೆಗೆ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಆಯೋಜಿಸಲಾಗಿತ್ತು,
ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಮುರಳಿ ಮೋಹನ್ ರೆಡ್ಡಿ ಅವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಾಮಸ್ಥರಿಗೆ ರಾಜ್ಯದಲ್ಲಿ ಮಹಿಳೆಯರಿಗಿರುವ ಕಾನೂನುಗಳ ಕುರಿತು ಹಾಗೂ ಇನ್ನು ಇತರ ಸೇವೆಗಳ ಕುರಿತು ವಿವರಿಸಿದರು.
ಕಾರ್ಮಿಕ ಅಧಿಕಾರಿ ರಾಜೇಶ್ ಜಾಧವ ಗ್ರಾಮದ ಕಾರ್ಮಿಕರಿಗೆ ಕಾರ್ಮಿಕರಿಗಾಗಿ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ವಿವರಿಸಿದರು. ಕಾರ್ಮಿಕ ಇನ್ಸ್‌ಪೆಕ್ಟರ್ ಮಾತನಾಡಿ ಬಾಲ ಕಾರ್ಮಿಕರ ಕುರಿತು ಮಾತನಾಡಿದರು.
ಕೆಎಲ್‌ಎಸ್ ರಾಜಾ ಲಖಮ್‌ಗೌಡ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಚ್. ಹವಾಲ್ದಾರ್ ಮಾತನಾಡಿ ಗ್ರಾಮಸ್ಥರಿಗೆ ಕಾಲೇಜಿನ ಕಾನೂನು ನೆರವು ಕೋಶದ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು. ಮತ್ತು ಗ್ರಾಮಸ್ಥರಿಗೆ ಕಾನೂನು ನೆರವು ಕೋಶದ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕಾನೂನು ನೆರವು ವಿಭಾಗದ ಸಂಯೋಜಕ ಪ್ರೊ. ಚೇತನಕುಮಾರ್ ಮತ್ತು ತಂಡದ ನೇತೃತ್ವದಲ್ಲಿ ಕಾರ‌್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ‌್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.