ನವದೆಹಲಿ, ಮಾ, 20, ಕ್ಷಣಕ್ಷಣಕ್ಕೂ ಎದುರಾದ ಕಾನೂನಿನ ಆತಂಕ ಮೀರಿ ನಿರ್ಭಯಾ ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಶಿಕ್ಷೆ ಜಾರಿಯಾಗಿ ದೇಶವೇ ನಿಟ್ಟಿಸಿರುಬಿಟ್ಟಿದೆ.ಇನ್ನು ದೇಶದ ತಿಹಾರದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗಿದೆ.ರಾತ್ರಿಯಿನಿದ್ದೆ ಮಾಡದೆ ಆತಂಕದಲ್ಲೆ ಕಾಲ ಕಳೆದಿದ್ದಾರೆ. ಏಳು ವರ್ಷ ತಡವಾದರೂ ಕೊನೆಗೂ ನ್ಯಾಯ ದೊರೆತಿದೆ. ಇಂದು ಬೆಳಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲಾಗಿದೆ. ಎಲ್ಲಕಾನೂನಿನ ಅಡ್ಡಿ ಆತಂಕ ಮುಗಿದ ನಂತರ ಹ್ಯಾಂಗ್ಮನ್ ಪವನ್ ಜಲ್ಲಾ ತಿಹಾರ್ ಜೈಲಿನಲ್ಲಿ ನೇಣಿಗೇರಿಸಿದರು.ರಾತ್ರಿಯಿಡಿಅಪರಾದಿಗಳು ಬಹಳ ಆತಂಕದಿಂದಲೇ ಕಾಲ ಕಳೆದರು ಸಾವು ಹತ್ತಿರ ಬಂದಾಗ ಊಟ ಹೇಗೆ ತಾನೆ ರುಚಿ ಕಂಡೀತು ಎಂಬ ಚಿಂತೆಯಲ್ಲಿ ಮುಳುಗಿದ್ದರು. ಇನ್ನು ಭಾರತ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗಿದೆ ಊಟವನ್ನು ತಿರಸ್ಕರಿಸಿದ ಅಪರಾಧಿಗಳು ಇಡೀ ರಾತ್ರಿಯಿಡಿ ಎಚ್ಚರ ಆತಂಕದಲ್ಲೇ ಕಾಲ ಹಾಕಿದರು ಎನ್ನಲಾಗಿದೆ .