“ಆಟಿಸಂ ಡೌನ ಸಿಂಡ್ರೋಮ” ಕುರಿತು ಉಪನ್ಯಾಸ ಕಾರ್ಯಕ್ರಮ
Lecture program on “Autism, Down Syndrome”
ಲೋಕದರ್ಶನ ವರದಿ
ಬೆಳಗಾವಿ 01: ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಯಳ್ಳೂರು ರಸ್ತೆ ಬೆಳಗಾವಿಯ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಆಸ್ಪತ್ರೆಯ ಚರಕ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ “ ಆಟಿಸಂ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಆಟಿಸಂ ಒಂದು ನರವೈಜ್ಞಾನಿಕ ಅಭಿವೃದ್ದಿ ಸಮಸ್ಯೆಯಾಗಿದ್ದು, ಮಕ್ಕಳ ಸಂವಹನ, ವರ್ತನೆ ಮತ್ತು ಸಾಮಾಜಿಕ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು. ಇಂತಹ ಮಕ್ಕಳಿಗೆ ಕುಟುಂಬದ ಪ್ರೀತಿ ಸಹನೆ ಮತ್ತು ತಜ್ಷರ ಮಾರ್ಗದರ್ಶನ ಅತ್ಯಂತ ಮುಖ್ಯವೆಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾ. ಸೌಮ್ಯ ವೆರನೆಕರ ಅವರು ಆಟಿಸಂ ಲಕ್ಷಣಗಳು ಶಿಘ್ರ ಗುರುತು ಹಿಡಿಯುವ ವಿಧಾನಗಳು ಮತ್ತು ಚಿಕಿತ್ಸ ಬಗ್ಗೆ ಮಾಹಿತಿ ನೀಡಿದರು, ಮಕ್ಕಳ ಮಾತನಾಡುವಲ್ಲಿ ವಿಳಂಬ ಕಣ್ಣಿನ ಸಂಪರ್ಕ ಕಡಿಮೆ ಇರುವುದು ಒಂದೇ ಕೆಲಸವನ್ನು ಪುನ: ಪುನ: ಮಾಡುವಂತಹ ಲಕ್ಷಣಗಳನ್ನು ಗಮನಿಸುವುದು ಅಗತ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೋಂಡ ಸಿಬ್ಬಂದಿ ವರ್ಗದವರಿಗೆ ಮಾರ್ಗದರ್ಶನ ನೀಡಲಾಗಿದ್ದು, ಮಕ್ಕಳ ಸಮಗ್ರ ಬೆಳವಣಿಗಾಗಿ ಥೇರಪಿ, ವಿಶೇಷ ಶಿಕ್ಷಣ ಮತ್ತು ಸಮುದಾಯದ ಬೆಂಬಲದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಕಡ್ಡಿ, ಡಾ.ಸಂತೋಷಕುಮಾರ ಕರಮಸಿ, ಯೊಗೇಶ ರಾವಳ, ಡಾ.ಮಿಲಿಂದ ಹಾಗೂ ಬಿ.ಎಸ.ಸಿ ಮತ್ತು ಜೆ.ಎನ್.ಎಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರನ್ನು ಡಾ. ಯೊಗೇಶ ರಾವಳ ಅವರು ನಿರೂಪಿಸಿ ವಂದಿಸಿದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಶ್ರೀ ನವೀಣ ಎನ್ ಅವರು ಮಕ್ಕಳಲ್ಲಿ ಆಟಿಸಂ ಲಕ್ಷಣಗಳು ಕಂಡುಬಂದಲ್ಲಿ ನಮ್ಮ ಆಸ್ಪತ್ರಯಲ್ಲಿ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು ಎಂದು ಕರೆ ನೀಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 