ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ
Lecture program on the occasion of World Cancer Day
ಲೋಕದರ್ಶನ ವರದಿ
ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ
ಧಾರವಾಡ 04: ದಿನಾಂಕ 04/02/2026 ರಂದು ಬೆಳಿಗ್ಗೆ 10.30 ಘಂಟೆಗೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ಧಾರವಾಡ ವತಿಯಿಂದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ (ಓಕ-ಓಅಆ) ದಡಿಯಲ್ಲಿ “ವಿಶ್ವ ಕ್ಯಾನ್ಸರ್ ದಿನಾಚರಣೆ 2026/ಘಠಟಜ ಅಚಿಟಿಛಿಜಡಿ ಆಚಿಥಿ 2026” (ಖಿಊಇಒಇ ಹಿ “ಗಟಿಣಜಜ ಛಥಿ ಗಟಿಡಣಜ” / ಘೋಷವಾಕ್ಯ ಹಿ “ವಿಶಿಷ್ಟತೆಯಿಂದ ಏಕತೆ”) ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಾಮಾನ್ಯ ಕ್ಯಾನ್ಸರ್ (ಬಾಯಿ, ಗರ್ಭಕೊರಳಿನ ಹಾಗೂ ಸ್ತನ ಕ್ಯಾನ್ಸರ) ತಪಾಸಣೆ ಹಾಗೂ ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಡಾ. ಎಸ್. ಎಮ್. ಹೊನಕೇರಿ, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಧಾರವಾಡ ಇವರು ಚಾಲನೆಯನ್ನು ನೀಡಿದರು.
“ವಿಶ್ವ ಕ್ಯಾನ್ಸರ್ ದಿನಾಚರಣೆ (ಘಠಟಜ ಅಚಿಟಿಛಿಜಡಿ ಆಚಿಥಿ) 2026 ರ ಘೋಷವಾಕ್ಯ ಹಿ “ವಿಶಿಷ್ಟತೆಯಿಂದ ಏಕತೆ” ಕುರಿತು ಮತ್ತು ಸಾಮಾನ್ಯ ಕ್ಯಾನ್ಸರ್ (ಬಾಯಿ, ಸ್ತನ್ ಹಾಗೂ ಗರ್ಭಕೊರಳು) ಗಳ ಲಕ್ಷಣಗಳು ಹಾಗೂ ತಡೆಗಟ್ಟುವಿಕೆ, ಕ್ಯಾನ್ಸರ್ ಮುಂಜಾಗೃತಾ ಕ್ರಮಗಳು, ತಪಾಸಣೆಯ ಅವಶ್ಯಕತೆ, ಜೀವನ ಶೈಲಿ, ಉತ್ತಮ ಆಹಾರ ಸೇವನೆ, ದುಶ್ಚಟಗಳು ಕುರಿತಾಗಿ ಮಾತನಾಡಿದರು ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿದರು ಮತ್ತು ರೋಗದ ಆರಂಭಿಕ ಹಂತದಲ್ಲಿ ಸೂಕ್ತ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು ಹಾಗೂ ಈ ರೋಗಕ್ಕೆ ಕಾರಣವಾಗುವ ಅಂಶ, ಕಾರ್ಯಗಳಿಂದ ಆದಷ್ಟು ದೂರವಿರಲು ತಿಳಿಸಿದರು ಹಾಗೂ ಎನ್.ಸಿ.ಡಿ ಕ್ಲಿನಿಕ್‌ನಲ್ಲಿ ಲಭ್ಯವಿರುವ ಸೇವೆಗಳ ಕುರಿತು ವಿವರಿಸಿದರು. ಡಾ. ಶೇಷಗಿರಿ ರಾವ, ಓಟಿಛಿಠಥಿಛಿಚಿಟಿ, ಎಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆ, ಹುಬ್ಬಳ್ಳಿ ಇವರು ಸಾಮಾನ್ಯ ಕ್ಯಾನ್ಸರ್ (ಬಾಯಿ, ಸ್ತನ್ ಹಾಗೂ ಗರ್ಭಕೊರಳು) ಗಳ ತಪಾಸಣೆ, ನಿರ್ವಹಣೆಯ ಹಾಗೂ ಚಿಕಿತ್ಸೆಯ ಕುರಿತು ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಸಂಗಪ್ಪಾ ಗಾಬಿ, ಮಾನ್ಯ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಧಾರವಾಡ, ಡಾ. ಎಸ್. ಬಿ. ಕಳಸೂರಮಠ, ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮ ಅಧಿಕಾರಿಗಳು, ಧಾರವಾಡ ಹಾಗೂ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಧಾರವಾಡ ತಾಲೂಕ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಕಛೇರಿಗಳ ಸಿಬ್ಬಂದಿಯವರು ಪಾಲ್ಗೊಂಡಿದ್ದರು. ಡಾ. ರಾಜೇಂದ್ರ ಗೊಡ್ಡೆಮ್ಮಿ, ವೈದ್ಯಾಧಿಕಾರಿಗಳು, ಡಿ.ಎಲ್.ಓ ಕಚೇರಿ, ಧಾರವಾಡ ಇವರು ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯವರನ್ನು ಸ್ವಾಗತಿಸಿದರು. ಬಿ. ಆರ್. ಪಾತ್ರೋಟ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಧಾರವಾಡ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಂದನಾರೆ್ನಯನ್ನು ಸಲ್ಲಿಸಿದರು. ಕಾರ್ಯಕ್ರಮದ ಫೋಟೋಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಈ ಸುದ್ದಿಯನ್ನು ಉಚಿತವಾಗಿ ಪ್ರಕಟಿಸಲು ಸೂಕ್ತ ಏರ್ಾಡು ಮಾಡಬೇಕಾಗಿ ವಿನಂತಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 