ವಿಜಯಪುರ, ಡಿ. 23: ನಗರದ ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯಕಾಲೇಜಿನ ಬ್ರಾಮಾ ಬ್ಲಾಕ್ ನಲ್ಲಿ ಕಿವಿ, ಮೂಗು, ಗಂಟಲು ವಿಭಾಗದ ವತಿಯಿಂದ ಶ್ರವಣದೋಷ ಹೊಂದಿರುವ ಮಕ್ಕಳಲ್ಲಿ ಕಾಕಲಿಯರ್ ಇಂಪ್ಲಾಟ್ ನ ಪ್ರಯೋಜನಗಳು ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಇಂದು ಸೋಮವಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜೆ. ಎನ್. ಮೆಡಿಕಲ್ ಕಾಲೇಜಿನ ಕಾಕ್ಲಿಯರ್ ಇಂಪ್ಲಾಟ್ ಸರ್ಜನ್ ಡಾ. ಪ್ರೀತಿ ಹಜಾರೆ ವೈದ್ಯರು ಮತ್ತು ವಾಕ್ ಶ್ರವಣತಜ್ಞರು ಹಾಗೂ 200 ಆಶಾ ಕಾರ್ಯಕರ್ತೆಯರಿಗೆ ಶ್ರವಣದೋಷ ಮತ್ತು ಕಾಕಲಿಯರ್ ಇಂಪ್ಲಾಂಟ್ ನಿಂದ ಆಗುವ ಲಾಭಗಳ ಕುರಿತು ಉಪನ್ಯಾಸ ನೀಡಿದರು.
ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಶ್ರವಣದೋಷ ಸಮಸ್ಯೆ ಇರುವದು ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆ ಮತ್ತು ಒಂದು ವರ್ಷದ ತರಬೇತಿ ಸೌಲಭ್ಯವಿದೆ. ಅಗತ್ಯವಿರುವ ಪೋಷಕರು ಇದರ ಉಪಯೋಗ ಪಡೆಯಬೇಕುಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತಗುಣಾರಿ ಮಾತನಾಡಿ, ಆಶಾ ಕಾರ್ಯಕರ್ತೆ ಈ ನಿಟ್ಟಿನಲ್ಲಿ ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಗುರುತಿಸಿ ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆಯನ್ನು ಕೊಡಬೇಕುಎಂದು ಹೇಳಿದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತಚಿಕಿತ್ಸೆ ತಜ್ಞ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ಎಲ್ಲ ಪಾಲಕರು, ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಎರಡು ಗಂಟೆಗಳ ಕಾಲ ನಡೆದ ಅರಿವು ಮೂಡಿಸುವ ಮತ್ತು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕಾಕ್ಲಿಯರ್ ಇಂಪ್ಲಾಟ್ ಕೋಆರ್ಡಿನೇಟರ್ ಡಾ. ಲತಾದೇವಿ ಅವರುಕಾಕ್ಲಿ ಯರ್‌ಇಂಪ್ಲಾಟ್ ಸಮಸ್ಯೆ ಇರುವವರನ್ನು ಗುರುತಿಸುವುದು, ಶಸ್ತ್ರಚಿಕಿತ್ಸೆ ಮುಂತಾದ ವಿಷಯದ ಬಗ್ಗೆ ಆಶಾ ಕಾರ್ಯಕರ್ತೆಯರೊಡನೆ ಸಂವಾದ ನಡೆಸಿದರು. ಕೆಲವು ಪಾಲಕರು ವೈದ್ಯರೊಡನೆ ನೇರಾನೇರ ಸಂವಾದ ಮಾಡಿದರು.
ಸುಮಾರು 100 ನುರಿತ ಮಕ್ಕಳ ವೈದ್ಯರು, ಇಎನ್ಟಿ, ವಾಕ್ ಶ್ರವಣತಜ್ಞರು ವೈದ್ಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯಅಧೀಕ್ಷಕಡಾ. ರಾಜೇಶ ಹೊನ್ನುಟಗಿ, ಸರಕಾರಿ ಇಎನ್ಟಿ ತಜ್ಞಡಾ. ಸಂಜಯ, ಆಸ್ಪತ್ರೆಯ ಇಎನ್ಟಿ ವಿಭಾಗದ ಮುಖ್ಯಸ್ಥಡಾ. ಕರಡಿ ಮುಂತಾದವರು ಉಪಸ್ಥಿತರಿದ್ದರು.