‘ಮಹರ್ಷಿ ಶ್ರೀ ಅರವಿಂದರ ತತ್ವದರ್ಶನ’ ಉಪನ್ಯಾಸ
Lecture on ‘Maharshi Sri Aravinda’s Philosophy’
ಧಾರವಾಡ 17: ಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀ ಗುರ್ಪನವರು ಶ್ರೀಮತಿ ಗೌರಮ್ಮ ಬೆಲ್ಲದ ದತ್ತಿ ಅಂಗವಾಗಿ ದಿನಾಂಕ 19-9-2025 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಮಹರ್ಷಿ ಶ್ರೀ ಅರವಿಂದರ ತತ್ವದರ್ಶನ’ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.
ಗೋವಾದ ಇಂಡೋ-ಪೋರ್ಚುಗೀಸ್ ಸಾಹಿತ್ಯ ಪ್ರತಿಷ್ಠಾನ ನಿರ್ದೇಶಕ ಡಾ. ಅರವಿಂದ ಯಾಳಗಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಧಾರವಾಡ ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸುವರು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಗುರ್ಪ ಬೆಲ್ಲದ ಉಪಸ್ಥಿತರಿರುವರು.
ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಶ್ರೀ ಗುರ್ಪನವರು ಗೌರಮ್ಮ ಬೆಲ್ಲದ ದಂಪತಿ ಅವರ ಕುರಿತು ಶರಣರಾದ ಚನಬಸಪ್ಪ, ಸಾತವ್ವ ದಂಪತಿಗಳ ಉದರದಲ್ಲಿ ಗುರ್ಪನವರ ಬೆಲ್ಲದ 1911ರಲ್ಲಿ ಜನಿಸಿದರು. ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದು ನಂತರ ‘ಕಾಯಕವೇ ಕೈಲಾಸ’ ವೆಂದು ಮುಂಬಯಿ ನಗರದಲ್ಲಿ ಕೆಲಸ ಪಡೆದುಕೊಂಡು, ವ್ಯವಹಾರಿಕ ಜಾಣತನದಿಂದ ಹಿಂದಿ ಮತ್ತು ಇಂಗ್ಲೀಷ ಭಾಷೆಗಳನ್ನು ಸರಿಯಾಗಿ ಅಭ್ಯಸಿಸಿ ಮಾತನಾಡಲು ಕರಗತ ಮಾಡಿಕೊಂಡರು. ನಂತರ ಬಸಪ್ಪ ಹೊಸಮನಿಯವರ ಮಗಳಾದ ಗೌರಮ್ಮಳ ಜೊತೆ ಮದುವೆಯಾಗಿ ವೈವಾಹಿಕ ಜೀವನ ಪ್ರಾರಂಭಿಸಿದರು.
ಧಾರವಾಡದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಿಂಟಿಂಗ್ ಪ್ರೆಸ್ಸಿನಲ್ಲಿ, ನಂತರ ರೇಶನ ಅಂಗಡಿಯಲ್ಲಿ ಮ್ಯಾನೇಜರಾಗಿ ಕೆಲಸದಲ್ಲಿ ತೊಡಗಿದರು. 1950 ರಲ್ಲಿ ಧಾರವಾಡ ಮುನ್ಸಿಪಾಲ್ಟಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ವ್ಯವಹಾರದಲ್ಲಿ ಮುಂದುವರೆಯಲು ದಲಾಲಿ ಅಂಗಡಿ ಪ್ರಾರಂಭಿಸಿದರು. ವ್ಯವಹಾರದಲ್ಲಿ ಹಾನಿ ಅನುಭವಿಸಿದ್ದರಿಂದ ಮುಂದೆ ಮುಂಬಯಿಯಲ್ಲಿ ಬಿರ್ಲಾ ಫ್ಯಾಕ್ಟರಿಯಲ್ಲಿ ಸೇವೆ ಮಾಡಲು ಸೇರಿದರು.
ಹಿರಿಯ ಮಗನಾದ ಚಂದ್ರಕಾಂತ ಚಿಕ್ಕ ವಯಸ್ಸಿನಲ್ಲಿಯೇ ಅದೇ ದಲಾಲಿ ಅಂಗಡಿಯನ್ನು ಮುಂದುವರೆಸಿ, ನಂತರ ಕೃಷಿಗೆ ಸಂಬಂಧಿಸಿದ ರೈತರ ಪ್ರಗತಿಯ ಮಶಿನರಿ ಮತ್ತು ಬೀಜ, ಗೊಬ್ಬರಗಳ ವ್ಯವಹಾರ ಪ್ರಾರಂಭಿಸಿ ಬೃಹದ್ದಾಕಾರದಲ್ಲಿ ಉತ್ತರಕರ್ನಾಟಕದಲ್ಲಿ ಬೆಳೆದು ಬಂದರು.
ತಮ್ಮನಾದ ಶಿವಪುತ್ರ ಬೆಲ್ಲದವರು ಎಲೆಕ್ಟ್ರಿಕ್ ಇಂಜನೀಯರಾಗಿ ಮಹಾರಾಷ್ಟ್ರದ ಎಲೆಕ್ಟ್ರಿಕ್ ಬೋರ್ಡ್‌ನಲ್ಲಿ ಸೇವೆ ಮಾಡುವ ಅವಕಾಶ ಬಿಟ್ಟು ಬಂದು ನಮ್ಮ ವ್ಯಾಪಾರ ಉದ್ಯಮದಲ್ಲಿ ಜೊತೆಯಾದರು.
ಇರ್ವರ ವ್ಯಾಪಾರದ ದುಡಿಮೆಯಿಂದ ಕೃಷಿಗೆ ಸಂಬಂಧಿಸಿದ ಉದ್ಯಮವಾದ ರೈತರ ಮಶಿನರಿಗಳ ಉಪಯೋಗದ ಟ್ರ್ಯಾಕ್ಟರ್ ಕೃಷಿ ಉಪಕರಣಗಳ ಮಾರಾಟದಲ್ಲಿ ರಾಜ್ಯದಲ್ಲಿಯೇ ಅಗ್ರಗಣ್ಯ ವ್ಯಾಪಾರಸ್ಥರಾಗಿ ಮುಂದುವರೆದರು.
ಮಾತೋಶ್ರೀ ಗೌರಮ್ಮನವರು 19-9-1967 ರಂದು ತಂದೆ ಗುರ್ಪನವರ ಬೆಲ್ಲದ 30-11-1989ರಂದು ಲಿಂಗೈಕ್ಯರಾದರು. ಇವರ ಸ್ಮರಣೆಗಾಗಿ ಮಕ್ಕಳಾದ ಚಂದ್ರಕಾಂತ ಮತ್ತು ಶಿವಣ್ಣ ಬೆಲ್ಲದ ಹಾಗೂ ಮೊಮ್ಮಕ್ಕಳಾದ ಚಿ. ಮಹೇಶ, ಚಿ. ಅರವಿಂದ, ಚಿ. ಪ್ರಶಾಂತ ಬೆಲ್ಲದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿ ಇಟ್ಟು ಪ್ರತಿ ವರುಷ ಸಪ್ಟಂಬರ 19 ರಂದು ಆದರ್ಶ ದಂಪತಿಗಳ ಸ್ಮರಣೆಯ ಕಾರ‌್ಯಕ್ರಮ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಬೆಲ್ಲದ ಕುಟುಂಬದ ಈ ಆದರ್ಶ ದಂಪತಿಗಳ ಸ್ಮರಣೆಯ ಕಾರ್ಯಕ್ರಮಕ್ಕೆ ಬನ್ನಿ ಭಾಗವಹಿಸಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 