ಲೋಕದರ್ಶನ ವರದಿ
ಶೇಡಬಾಳ 10: ಹದಿಹರೆಯದ ಯುವಕ ಯುವತಿಯರಿಗೆ 12 ರಿಂದ 18 ವರ್ಷ ವಯಸ್ಸು ಹಲವಾರು ತಿರುವುಗಳನ್ನು ಪಡೆದುಕೊಳ್ಳುವ ವಯಸ್ಸಾಗಿದ್ದು, ಈ ವಯಸ್ಸಿನ ಯುವಕ ಯುವತಿಯರ ಮನಸ್ಸಿನ ಮೇಲೆ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಕಾರಣ ಹದಿಹರೆಯದ ಯುವಕ ಯುವತಿಯರು ಅತ್ಯಂತ ಜಾಗರೂಕತೆಯಿಂದ ನಡೆದುಕೊಳ್ಳುವಂತೆ ಮಿರಜದ ಹಳಿಂಗಳಿ ಫೌಂಡೇಶನ ಅಧ್ಯಕ್ಷರು ಹಾಗೂ ನಿರ್ಮಲ ವ್ಯಸನ ಮುಕ್ತಿ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ ಹಳಿಂಗಳಿ ಕರೆ ನೀಡಿದರು.
ಅವರು ಶುಕ್ರವಾರ ದಿ. 10 ರಂದು ಸಾಂಗಲಿಯ ಭಾರತಿಯ ಸಮಾಜ ಸೇವಾ ಕೇಂದ್ರ ಆಯೋಜಿಸಿದ ವಿದ್ಯಾಥರ್ಿಗಳಲ್ಲಿ ಲೈಂಗಿಕ ಜ್ಞಾನ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಹದಿಹರೆಯದ ವಯಸ್ಸು ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತವೆ. ಶಾರೀರಿಕ, ಮಾನಸಿಕ, ಭೌಧಿಕ ಮತ್ತು ಸಾಮಾಜಿಕವಾಗಿಯೂ ಪ್ರಕಟಗೊಳ್ಳುತ್ತವೆ.
ಅವರ ನಡೆ -ನುಡಿ, ಆಚಾರ- ವಿಚಾರ ಎಲ್ಲವು ಬದಲಾಗಿ ಅವರದೇ ಆದ ಸುಂದರ ಕಲ್ಪನಾಲೋಕದಲ್ಲಿ ತೇಲಾಡುತ್ತಾರೆ. ಆ ವಯಸ್ಸಿನಲ್ಲಿ ಹಲವಾರು ತಪ್ಪು ತಿಳುವಳಿಕೆ ನಿರ್ಣಯಗಳು ಅವರನ್ನು ಆವರಿಸಿಕೊಳ್ಳುತ್ತವೆ. ವಷರ್ಾನುಗಟ್ಟಲೇ ಆ ತಪ್ಪು ತಿಳುವಳಿಕೆಯಿಂದ ಆತನು ಹೊರ ಬರದೇ ತನ್ನಷ್ಟಕ್ಕೆ ತಾನೇ ಕೊರಗುವಂತಾಗುತ್ತದೆ. ಈ ವಿಷಯವಾಗಿ ಪಾಲಕರಲ್ಲಿ, ಶಿಕ್ಷಕರಲ್ಲಿ ಬಿಚ್ಚು ಮನಸ್ಸಿನಿಂದ ಚಚರ್ಿಸದೇ ಇರುವುದರಿಂದ ಅವನು ಪ್ರಶ್ನೆಗೆ ಉತ್ತರ ಸಿಗದೇ ಚಡಪಡಿಸುವಂತಾಗುತ್ತದೆ. ಕಾರಣ ಇವೆಲ್ಲವುಗಳ ಪರಿಹಾರಗೋಸ್ಕರ ಯುವಕ ಯುವತಿಯರಿಗೆ ಲೈಂಗಿಕ ಶಿಕ್ಷಣ ಜ್ಞಾನ ನೀಡಬೇಕಾಗಿರುವುದು ಅತ್ಯಶ್ಯಕವಾಗಿದೆ ಎಂದು ಹೇಳಿದರು.
ಯುವಕ ಯುವತಿಯರು ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೇ ಸನ್ಮಾರ್ಗದಲ್ಲಿ ಸಾಗಿ ಉತ್ತಮ ಭವಿಷ್ಯ ನಿಮರ್ಿಸಿಕೊಳ್ಳುವಂತೆ ಡಾ. ಚಂದ್ರಶೇಖರ ಹಳಿಂಗಳಿ ಕರೆ ನೀಡಿದರು.
ಈ ಸಮಯದಲ್ಲಿ ಭಾರತೀಯ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ವಿದ್ಯಾಥರ್ಿಗಳು ಹಳಿಂಗಳಿ ಫೌಂಡೇಶನನ ನಿರ್ಮಲ ವ್ಯಸನ ಮುಕ್ತಿ ಕೇಂದ್ರದ ಸಿಬ್ಬಂದಿ ವರ್ಗ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಅನಿಲ ಪಾಟೀಲ ಸ್ವಾಗತಿಸಿದರು. ನಿಷಿಕಾಂತ ದುಮಾಳೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ದೀಪಾಲಿ ಪಾಟೀಲ ವಂದಿಸಿದರು. ಭಾಗ್ಯಶ್ರೀ ವಾಯದಂಡೆ ಕಾರ್ಯಕ್ರಮ ನಿರೂಪಿಸಿದರು.