ಕರಿಯರ್ ಗೈಡನ್ಸ್ ಇನ್ ಬಯೋಸ್ಟೆಟಿಸ್ಟಿಕ್ ಕುರಿತು ಉಪನ್ಯಾಸ

ಲೋಕದರ್ಶನ ವರದಿ

ಬೆಳಗಾವಿ 30:  ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ದಿ. 29ರಂದು 'ಕರಿಯರ್ ಗೈಡನ್ಸ್ ಇನ್ ಬಯೋಸ್ಟೆಟಿಸ್ಟಿಕ್ ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ಏರ್ಪಡಿಸಲಾಯಿತು.

ಕಾರ್ಯಕ್ರಮದ ಅತಿಥಿಗಳು ಹಾಗೂ ಕೆಎಲ್ಇ ವಿಶ್ವವಿದ್ಯಾಲಯದ ಜೀವಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನರೇಶ ಕುಮಾರ ತ್ಯಾಗಿ ಮಾತನಾಡುತ್ತ ಜೀವಸಂಖ್ಯಾಶಾಸ್ತ್ರದ ಅನ್ವಯಗಳ ಕುರಿತು ವಿವರಿಸಿದರು. ಮತ್ತೋರ್ವ ಅತಿಥಿಗಳು ಹಾಗೂ ಕೆಎಲ್ಇ ವಿಶ್ವವಿದ್ಯಾಲಯದ ಜೀವಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಂಗ್ ಬಹದ್ದೂರ ಪ್ರಸಾದ ಅವರು ಮಾತನಾಡುತ್ತ ಪದವಿ ನಂತರ ಜೀವಸಂಖ್ಯಾಶಾಸ್ತ್ರದಲ್ಲಿ ಇರುವ ಅವಕಾಶಗಳ ಕುರಿತು ವಿವರಿಸಿದರು.

ಪ್ರೊ. ಸುಧಾ ಸರಿಕರ ಸರ್ವರನ್ನು ಸ್ವಾಗತಿಸಿದರು. ಪ್ರೊ. ವಿಜಯಲಕ್ಷ್ಮೀ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು.  ಪ್ರೊ. ಅಜಿತ್ ಸುತಾರ ಅವರು ವಂದಿಸಿದರು. ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.