ದೇಶಪಾಂಡೆ ಸಭಾಭವನದಲ್ಲಿ‘ವ್ಯಕ್ತಿತ್ವ ವಿಕಸನದಲ್ಲಿ ಮನೋಭೂಮಿಕೆ’ ವಿಷಯ ಕುರಿತು ಉಪನ್ಯಾಸ

Lecture on 'The Role of Mind in Personality Development' at Deshpande Sabha Bhavan

ಧಾರವಾಡ 09 : ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಎಸ್‌.ಜಿ. ನಾಡಗೀರ ಸ್ಮರಣಾರ್ಥದತ್ತಿ ಅಂಗವಾಗಿ ದಿನಾಂಕ 10-3-2025 ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ‘ವ್ಯಕ್ತಿತ್ವ ವಿಕಸನದಲ್ಲಿ ಮನೋಭೂಮಿಕೆ’ ವಿಷಯ ಕುರಿತು ಉಪನ್ಯಾಸ ಏರ್ಪಡಿಸಿದೆ.

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷರಾದ ಡಾ. ಆನಂದ ಪಾಂಡುರಂಗಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು.ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿವೃತ್ತ ಮುಖ್ಯ ಅಭಿಯಂತರರಾದ ಅರುಣ ಎಸ್‌. ನಾಡಗೀರ ಅಧ್ಯಕ್ಷತೆ ವಹಿಸುವರು.ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿಕೋರಿದ್ದಾರೆ.10 ಮಾರ್ಚ 1915 ರಂದು ಜನಿಸಿದ ಇವರು ಅಂದಿನ ವಿಕ್ಟೋರಿಯಾ (ಇಂದಿನ ವಿದ್ಯಾರಣ್ಯ) ಹೈಸ್ಕೂಲಿನಲ್ಲಿಅಭ್ಯಾಸ ಮಾಡಿ ನಂತರ ಎಂ.ಎ.ಬಿ.ಎಡ್ ಪದವಿಗಳನ್ನು ಪಡೆದು, “ರಾ​‍್ಯಂಕುಗಳ ಬ್ಯಾಂಕ್‌” ಎಂದೇ ಹೆಸರಾಗಿದ್ದಧಾರವಾಡದ ಮಾಳಮಡ್ಡಿ ಕೆ.ಇ.ಬೋರ್ಡ ಹೈಸ್ಕೂಲಿನ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸ್ಮರಣೀಯ, ಗಣನೀಯ ಸಾರ್ಥಕ್ಯದ ಸೇವೆಯನ್ನು ಸಲ್ಲಿಸಿ, ಎಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ, ಗೌರವಗಳನ್ನು ಗಳಿಸಿಕೊಂಡು ಆದರ್ಶ ಶಿಕ್ಷಕರ ಕ್ಯಾಪ್ಟನ್‌ರಾಗಿಕಾರ್ಯ ಮಾಡಿದವರೇ ದಿ.ಶ್ರೀ ಎಸ್‌.ಜಿ. ನಾಡಗೀರ ಮಾಸ್ತರರು. 

ವಿದ್ಯಾರ್ಥಿ, ಶಿಕ್ಷಕ, ಶಿಕ್ಷಣ ರಂಗದ ಏಳಿಗೆಗಾಗಿ ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರು. “ಕರ್ಮಯೋಗಿ” ಡಾ.ಕಬ್ಬೂರ ನಾರಾಯಣರಾಯರ ನೇತೃತ್ವ, ಮಾರ್ಗದರ್ಶನದಲ್ಲಿಅನುದಾನಿತ ಶಿಕ್ಷಣ ಸಂಘ, ಸಂಸ್ಥೆಗಳ ಕಾರ್ಯದರ್ಶಿಯಾಗಿ, ಶಿಕ್ಷಣ ಸುಧಾರಕರಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಹೆಗ್ಗಳಿಕೆ ಇವರದು.ಆಗಿನ ಶಿಕ್ಷಣ ಸಚಿವಎಸ್‌. ಆರ್‌.ಕಂಠಿ, ಇಲಾಖೆಯ ಹಿರಿಯಅಧಿಕಾರಿ, ಎಸ್‌. ಆರ್‌.ರೋಹಿಡೇಕರರು ನಾಡಗೀರ ಮಾಸ್ತರರ ಸಲಹೆ ಸೂಚನೆಗಳನ್ನು ಪಡೆದು ಅವುಗಳನ್ನು ಕಾರ್ಯರೂಪಕ್ಕೆತರುತ್ತಿದ್ದರು.ಇವರು ಸಲ್ಲಿಸಿದ ಸ್ಮರಣೀಯ ಸೇವೆಗಾಗಿ ಭಾರತ ಸರಕಾರವು ‘ರಾಷ್ಟ್ರ ಪ್ರಶಸ್ತಿ’ ಪುರಸ್ಕಾರ ನೀಡಿ ಗೌರವಿಸಿದೆ.ದಿನಾಂಕ: 27-1-2011 ರಂದು ಕೊನೆ ಉಸಿರು ಎಳೆದ ಇವರು ಸಹಸ್ರಾರು ವಿದ್ಯಾರ್ಥಿಗಳ, ಪಾಲಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಅಮರರಾಗಿದ್ದಾರೆ.ಇವರ ಸ್ಮರಣಾರ್ಥಇವರ ಪುತ್ರ ಶ್ರೀ ಅರುಣಎಸ್‌. ನಾಡಗೀರಅವರು ಸಂಘದಲ್ಲಿದತ್ತಿ ಇರಿಸಿ ಪ್ರತಿ ವರ್ಷಕಾರ‌್ಯಕ್ರಮಏರಿ​‍್ಡಸಲು ಅನುವು ಮಾಡಿಕೊಟ್ಟಿದ್ದಾರೆ.ಬನ್ನಿ ಕಾರ‌್ಯಕ್ರಮದಲ್ಲಿ ಭಾಗವಹಿಸಿ.