ಲೋಕದರ್ಶನ ವರದಿ
ಕೊಪ್ಪಳ: ವಿಶ್ವ ವಿದ್ಯಾರ್ಥಿದಿನದ ಅಂಗವಾಗಿ ಎಸ್ಐಓ(ಖಠ) ವಿದ್ಯಾಥರ್ಿ ಸಂಘಟನೆ ಕರ್ನಾಟಕ ಘಟಕದ ವತಿಯಿಂದ ರಾಜ್ಯ ಮಟ್ಟದ ಕಥಾ ಸ್ಪರ್ಧೆಗೆ ಪದವಿ, ಸ್ನಾತಕೋತ್ತರ ಪದವಿ, ಮತ್ತು ಸಂಶೋಧನಾ ವಿದ್ಯಾರ್ಥಿಗಳಿಂದ ಕಥೆಗಳ ಆಹ್ವಾನ ನೀಡಿದ್ದು ಇದರ ಪ್ರಯುಕ್ತವಾಗಿ ದಿ. 23ರ ಬುಧವಾರ ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಣದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತು ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್_ಫೀರ ಲಟಗೇರಿ ಅವರು ಉಪನ್ಯಾಸ ಕಾರ್ಯಕ್ರಮ ನೀಡಿದರು.
ಇದರ ಜೊತೆಗೆ ಎಸ್ಐಓವು ವಿದ್ಯಾರ್ಥಿಗಳಲ್ಲಿ ಆಧುನಿಕ ಜೀವನ ವ್ಯವಸ್ಥೆಯ ಭರಾಟೆಯಲ್ಲಿ ಕುಂದು ಹೋಗುತ್ತಿರುವ ಸಾಹಿತ್ಯದ ಮೇಲಿನ ಒಲವು ಮತ್ತು ಅದರ ಮೇಲಿನ ಆಸಕ್ತಿ ಕ್ಷೀಣಿಸುತ್ತಿರುವುದನ್ನು ಮನಗಂಡ ಎಸ್ಐಓ ಸಾಹಿತ್ಯ ಕ್ಷೇತ್ರದ ವಿವಿಧ ಬಗೆಯ ಪ್ರಕಾರದ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಇಂತಹ ಸ್ಪರ್ಧೆಯು ಅದಕ್ಕೆ ಸಹಕಾರಿಯಾಗಲಿದೆ ಇದರಿಂದ ಸಾಹಿತ್ಯದ ಕ್ರಿಯಾತ್ಮಕ ಚಟುವಟಿಕೆಗಳು ಜರುಗಬೇಕೆಂದು ವಿದ್ಯಾರ್ಥಿಗಳಿಂದ ನೀರಿಕ್ಷೆ ಇಟ್ಟುಕೊಂಡು ನಡೆಸುತ್ತಿರುವುದಾಗಿ ತಿಳಿಸಲಾಯಿತು ಈ ಸಂದರ್ಭದಲ್ಲಿ ದೈಹಿಕ ಹಾಗೂ ಕ್ರಿಡಾ ವಿಭಾಗದ ಶಿಕ್ಷಕರಾದ ಶೋಭಾ ಕೆ.ಎಚ್ ಹಾಗೂ ಎಸ್ಐಓ ಜಿಲ್ಲಾ ಕಾರ್ಯದರ್ಶಿ ಜಕರಿಯಾ ಹಾಗೂ ನಗರ ಘಟಕದ ಅಧ್ಯಕ್ಷರಾದ ಫಹಾದ್ ಮತ್ತು ಕೊಪ್ಪಳ ನಗರದ ಪ್ರಥಮ ದಜರ್ೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.