ಬೆಂಗಳೂರು, 25 ಬೊಮ್ಮನಹಳ್ಳಿ ವಲಯದ ಅರಕೆರೆ ವಾಡರ್್ ನಲ್ಲಿರುವ ಹುಳಿಮಾವು ಕೆರೆ ದಂಡೆ ಒಡೆದು ಏಕಾಏಕಿ ನೀರು ನುಗ್ಗಿದ್ದರಿಂದ ಆರು ಬಡಾವಣೆಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಹಾನಿಯಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ ) ಆಯುಕ್ತ ಎಚ್. ಅನಿಲ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಆರ್.ಆರ್.ಲೇಔಟ್, ಕೃಷ್ಣ ಲೇಔಟ್, ಅವನಿ ಶೃಂಗೇರಿ ಬಡಾವಣೆ, ರಾಯಲ್ ರೆಸಿಡೆನ್ಸಿ ಮುಂತಾದ ಪ್ರದೇಶದಲ್ಲಿ ಸುಮಾರು 2-4 ಅಡಿ ವರೆಗೂ ನೀರು ಹರಿದು ಎಲ್ಲಾ ಮನೆಗಳು ಜಲಾವೃತವಾಗಿ ಮನೆ ಬಳಕೆಯ ಎಲ್ಲಾ ವಸ್ತುಗಳು ಹಾಳಾಗಿವೆ. ಸುಮಾರು 800 ಮನೆಗಳು ನೀರಿನಲ್ಲಿ ಮುಳುಗಿರುವ ಅಂದಾಜಿಸಲಾಗಿದೆ. ವಾಹನ ಸೇರಿದಂತೆ ಇತರ ವಸ್ತುಗಳ ಹಾನಿಯ ಕುರಿತು ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಕಂದಾಯ ವಿಭಾಗದ ಅಧಿಕಾರಿಗಳೂ ಮಹಜರ್ ನಡೆಸಿ ವರದಿ ನೀಡಲಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಹಾನಿಗೊಳಗಾಗಿರುವ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯ ತಂಡವನ್ನು ನಿಯೋಜಿಸಿ ಸ್ವಚ್ಚತಾ ಕಾರ್ಯ ಕೈಗೊಳ್ಳಲು ಕ್ರಮ ವಹಿಸಲು ಸೂಚಿಸಿದರು. ನೀರು ನುಗ್ಗಿದ ಬಡಾವಣೆಯ ನಿವಾಸಿಗಳನ್ನು ಕೂಡಲೇ ಎನ್ ಡಿಆರ್ ಎಫ್, ಸಿಆರ್ ಪಿಎಫ್, ಕೆಎಸ್ ಆರ್ ಪಿ, ಅಗ್ನಿ ಶಾಮಕ ದಳ, ಪೊಲೀಸ್ ಮತ್ತು ಮಾರ್ಷಲ್ ಗಳ ನೆರವಿನಿಂದ ತಾತ್ಕಾಲಿಕವಾಗಿ ಟೆನ್ನಿಸ್ ಕೋಟ್9, ಶಾಲೆ, ಅಂಬೇಡ್ಕರ್ ಭವನ, ಸಾಯಿಬಾಬಾ ಆಶ್ರಮ ಮತ್ತಿತರರ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸಂತ್ರಸ್ತರ ಸಂಚಾರಕ್ಕೆ ವಾಹನ ವ್ಯವಸ್ಥೆ, ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ತುತರ್ು ಸೇವೆಗಾಗಿ ಅಂಬುಲೆನ್ಸ್ ವ್ಯವಸ್ಥೆ, ವೈದ್ಯಕೀಯ ಸೇವೆ ನೀಡಲು ವೈದ್ಯರು ಹಾಗೂ ಸಹಾಯಕರುಗಳನ್ನು ಕೂಡ ನಿಯೋಜಿಸಲಾಗಿದೆ. ಮನೆಗಳು, ಆಸ್ಪತ್ರೆಗಳಲ್ಲಿ ಸಿಲುಕಿದ್ದವರನ್ನು ತಾತ್ಕಾಲಿಕ ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮನೆಗಳು, ಕಚೇರಿ, ಆಸ್ಪತ್ರೆ, ಅಪಾಟರ್್ ಮೆಂಟ್ ಗಳ ನೆಲಮಹಡಿಯಲ್ಲಿ ಶೇಖರಣೆಯಾಗಿರುವ ನೀರನ್ನು ವಾಟರ್ ಸಕ್ಕಿಂಗ್ ಯಂತ್ರಗಳ ಮೂಲಕ ಹೊರತರುವ ಕಾರ್ಯದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ನಿರತರಾಗಿದ್ದಾರೆ. ಹುಳಿಮಾವು ಕೆರೆಯಿಂದ ಹರಿಯುವ ನೀರನ್ನು ತಡೆಯಲು ಬಿಎಂಆರ್ ಸಿಎಲ್, ಬಿಬಿಎಂಪಿಗಳ ಜೆಸಿಬಿ ಹಾಗೂ ಟ್ರಕ್ ಗಳ ನೆರವಿನಿಂದ ಕೆರೆಗೆ ಮಣ್ಣನ್ನು ಸುರಿದು ನೀರು ಹರಿಯುವಿಕೆ ತಡೆಗಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.