ಲೋಕದರ್ಶನವರದಿ
ಗುಳೇದಗುಡ್ಡ01: ವಿದ್ಯಾಥರ್ಿಗಳು ಅಧ್ಯಯನದಲ್ಲಿ ಭಯ, ಆತಂಕ ಹಾಗೂ ಕೀಳರಿಮೆ ತೊರೆಯುವವರೆಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ವಿಶ್ರಾಂತ ಶಿಕ್ಷಕಿ ಶಾಂತಾ ಕರಡಿಗುಡ್ಡ ಹೇಳಿದರು.
ಅವರು ಇಲ್ಲಿನ ಪಿಇ ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಒಬ್ಬ ಶಿಲ್ಪಿ ಒಂದು ಶಿಲೆಯನ್ನು ಕಟಿದು ಸುಂದರ ಮೂತರ್ಿ ಮಾಡುವಂತೆ ನಿಮ್ಮ ಭವಿಷ್ಯವನ್ನು ಶಿಕ್ಷಕರು ಉಜ್ವಲಗೊಳಿಸಲು ಶ್ರಮಿಸಿದ್ದಾರೆ. ಇಂಥಹ ಶಿಕ್ಷಕರಿಗೆ ಹಾಗೂ ಕಲಿತ ಶಾಲೆಗೆ ಕೀತರ್ಿ ತರುವಂತವರಾಗಿ ಎಂದು ಹೇಳಿದರು.
ಶಾಲೆಯ ಚೇರಮನ್ ಅಶೋಕ ಹೆಗಡಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಗಂಗಮ್ಮ ಅಂಗಡಿ ಪೂರ್ವ ಪ್ರಾಥಮಿಕ ಶಾಲೆಯ ಚೇರಮನ್ ಹಾಗೂ ಆಡಳಿತ ಮಂಡಳಿಯ ಸದಸ್ಯ ಹೆಚ್.ವಿ.ಹೊಕ್ರಾಣಿ, ಎಮ್.ಪಿ.ಕಾವಡೆ, ಶಾಲೆಯ ಮುಖ್ಯಗುರುಮಾತೆ ಜೆ.ಜೆ.ಲೋಬೋ, ವಿ.ಬಿ.ಹಳ್ಳೂರ, ಸುಜಾತಾ ಕರಡಿಗುಡ್ಡ ಮತ್ತು ವಿದ್ಯಾಥರ್ಿ ಪ್ರತಿನಿಧಿಗಳಾದ ಪ್ರಥಮೇಶ ವಾಗ್ಮೋಡೆ, ರೇಣುಕಾ ದೊಂಗಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಆಯ್.ಯಳಮೇಲಿ ಶಿಕ್ಷಕ ವಿ.ಬಿ.ಹಳ್ಳೂರ ಹಾಗೂ ಕ್ರಿಸ್ಟಿನಾ ಗೌಡರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಎ.ಎನ್.ಹೆಗಡಿಯವರು ಅಧ್ಯಕ್ಷೀಯ ಭಾಷಣ ಮಾಡಿದರು. ವಿದ್ಯಾಥರ್ಿನಿಯರಾದ ಕುಮಾರಿ ಅಲ್ಪಿಯಾ ಮತ್ತು ಸಂಗಡಿಗರು ಪ್ರಾಥರ್ಿಸಿದರು. ಶ್ರೀಮತಿ ವಿ.ಬಿ.ಹಳ್ಳೂರ ಸ್ವಾಗತಿಸಿದರು. ಕುಮಾರಿ ಖುಷಿ ಕಾಟವಾ ಹಾಗೂ ಕುಮಾರಿ ಪೂಣರ್ಿಮಾ ದೇವಾಂಗಮಠ ನಿರೂಪಿಸಿದರು. ಶ್ರೀಮತಿ ಎಸ್.ಬಿ.ಖೋತ್ ವಂದಿಸಿದರು.