ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

ಲೋಕದರ್ಶನ ವರದಿ

ಶಿರಹಟ್ಟಿ: ತಾಲೂಕಿನ ಶೆಟ್ಟೀಕೇರಿ ಗ್ರಾಮದ ಹನಮಂತಪ್ಪ ಶಿವಪ್ಪ ಹರಿಜನ ಮತ್ತು ಬಟ್ಟೂರು ಗ್ರಾಮದ ಲಲಿತವ್ವ ಫಕ್ಕೀರಪ್ಪ ಕುಸಲಾಪೂರ ಅವರು ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ದೀಪಕ್ ಲಮಾಣಿ, ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ ಯುವ ಧುರೀಣರಾದ ಮಹೇಶ ಬಡ್ನಿ, ಶಿವು ಲಮಾಣಿ, ಚಂದ್ರು ಲಮಾಣಿ ಹಾಗೂ ಶೆಟ್ಟೀಕೇರಿ ಮತ್ತು ಬಟ್ಟೂರ ಗ್ರಾಮದ ಯುವಕರು ಉಪಸ್ಥಿತರಿದ್ದರು.