ಕಲಿಕೆ ಒಂದು ನಿರಂತರ ಪ್ರಕ್ರಿಯೆ: ಪರಣಿ


ಬೆಳಗಾವಿ 27: ಕಲಿಕೆ ಒಂದು ನಿರಂತರ ಪ್ರಕ್ರಿಯೆ, ಟೆಕ್ನಾಲಜಿ ನಿರಂತರವಾಗಿ ಬದಲಾಗುತ್ತಿರುವ ಈ ಸಮಯದಲ್ಲಿ ಶಿಕ್ಷಕರ ಜವಾಬ್ದಾರಿ ಅತಿಮಹತ್ವದ್ದಾಗಿದೆ. ಶಿಕ್ಷಣದ ಆರ್ಥವ್ಯಾಪ್ತಿ ಸಹ ಇಂದು ವಿದ್ಯಾಥರ್ಿಗಳಲ್ಲಿ ಬೇರೆ ರೀತಿಯಲ್ಲಿ ಅಥರ್ೈಸಲಾಗುತ್ತಿದೆ ಎಂದು ಪುಣೆಯ ಬ್ರೆನ್ ಅಕಾಡೆಮಿ ನಿದರ್ೇಶಕ ಶರತ್ ಎಂ. ಪರಣಿ ಅವರು ತಿಳಿಸಿದರು.

ನಗರದ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚರ್ಾರ್ಯ ಡಾ. ಎಸ್.ಎಸ್. ಸಾಲಿಮಠರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಇಂದು ಥಿಮರಿ ಹಾಗೂ ಪ್ರಾಕ್ಟಿಕಲ್ ಬಹುಮುಖ್ಯವಾದ ಅಂಶಗಳಾಗಿದ್ದು, ನಿರಂತರ ಕಲಿಕೆ ಹಾಗೂ ಸಾಮಾನ್ಯ ಜ್ಞಾನಗಳು ಎಲ್ಲಾ ರಂಗಗಳಲ್ಲಿ ಬಹುಮುಖ್ಯವಾಗಿವೆ. ಶಿಕ್ಷಕರು ಇಂದು ಎಲ್ಲ ರೀತಿಯ ವಿಷಯಗಳಲ್ಲಿ ಪರಿಣಿತರಾಗುವುದು ಅವಶ್ಯವಾಗಿದೆ. ಇಂದು ಇಂಜಿನೀಯರಿಂಗ್ ಬೋಧನೆಗೆ ಸಾಂಪ್ರದಾಯಕ ಶಿಕ್ಷಣವು ಇರದೇ ಇರುವುದರಿಂದ ಈ ರೀತಿಯ "ಪೆಡಗಾಗಿ ಪಾರ್ ಇಂಜಿನೀಯರಿಂಗ್ ಪ್ಯಾಕಲ್ಟಿ" ಎಂಬ ವಿಷಯವನ್ನು ಈ ಸಾಲಿನ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದ ಧ್ಯೇಯವಾಗಿರಿಸಲಾಗಿದೆ ಎಂದು ತಿಳಿಸಿದರು.

ಪ್ರೋ. ಪ್ರಸಾದ ಕಲ್ಲೋಳಿಮಠ ಸ್ವಾಗತಿಸಿದರು, ಕಾರ್ಯಕ್ರಮದ ರೂಪರೇಷಗಳನ್ನು ಸಂಯೋಜಕ ಡಾ. ಕೆ.ಬಿ. ಜಗದೀಶಗೌಡ ಸಭೆಗೆ ವಿವರಿಸಿದರು, ಪ್ರೋ. ಆನಂದ ಪೊದ್ದಾರ ನಿರ್ವಹಿಸಿದರು. ಎಲ್ಲ ವಿಭಾಗದ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.