ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ : ಡಾ ಕರಿಸಿದ್ದಪ್ಪ

ಲೋಕದರ್ಶನ ವರದಿ

ಬೆಳಗಾವಿ10:  ಕೆ.ಎಲ್. ಎಸ್. ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ: 10/04/2019 ರಂದು "ಪ್ರತಿಭಾ ಪುರಸ್ಕಾರ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿ.ಟಿ.ಯು (ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ) ದ ಉಪಕುಲಪತಿಗಳಾದ ಡಾ. ಕರಿಸಿದ್ದಪ್ಪನವರು ಆಗಮಿಸಿದ್ದರು.  ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಕೆ.ಎಲ್.ಎಸ್. ಸಂಸ್ಥೆಯ ಚೇರಮನ್ರಾದ  ಎಂ. ಆರ್. ಕುಲಕಣರ್ಿಯವರು ವಹಿಸಿದ್ದರು.  ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಕಾರ್ಯಧ್ಯಕ್ಷರಾದ ವ್ಹಿ. ಎಂ. ದೇಶಪಾಂಡೆಯವರು ವಹಿಸಿದ್ದರು.  ಪ್ರಾಂಶುಪಾಲರಾದ ಡಾ. ಎಚ್. ಎಚ್. ವೀರಾಪೂರವರು ಸ್ವಾಗತ ಭಾಷಣವನ್ನು ಮಾಡುತ್ತಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. 

ಡಾ. ಕರಿಸಿದ್ದಪ್ಪನವರು ತಮ್ಮ ಭಾಷಣದಲ್ಲಿ ವಿದ್ಯಾಥರ್ಿಗಳಿಗೆ ಕಲಿಕೆ ಎಂಬುದು ನಿರಂತರವಾದ ಪ್ರಕ್ರಿಯೆಯಾಗಿದೆ.  ಕಲಿಕೆ ಎಂಬುದು ಜೀವನದ ಅತ್ಯುತ್ತಮವಾದ ಮೌಲ್ಯಗಳನ್ನು ಅರಿತುಕೊಳ್ಳಲು ಸಹಾಯಕಾರಿಯಾಗುತ್ತದೆ. ನಿಮ್ಮ ಜೀವನಕ್ಕೆ ಒಂದೊಂದು ಉತ್ತಮವಾದ ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನು ತಲುಪಲು ವಿದ್ಯಾಥರ್ಿಗಳು ಪ್ರಯತ್ನಿಸಬೇಕು.  ವಿದ್ಯಾಥರ್ಿಗಳಾದ ನೀವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಿರುವ ಆದರ್ಶ ವ್ಯಕ್ತಿಗಳ ಆದರ್ಶಗಳನ್ನು ಬೆಳೆಸಿಕೊಳ್ಳಬೇಕೆಂಬುದಾಗಿ ಹೇಳಿದರು. 

  ಗೌರವಾರ್ಥ ಅತಿಥಿಸ್ಥಾನವನ್ನು ವಹಿಸಿದ್ದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಕಾರ್ಯದ್ಯಕ್ಷರಾದ ವ್ಹಿ. ಎಂ. ದೇಶಪಾಂಡೆಯವರು ವಿದ್ಯಾಥರ್ಿಗಳೆಲ್ಲರು ಅತ್ಯುತ್ತಮವಾದ ವ್ಯಕ್ತಿತ್ವಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. 

ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕೆ. ಎಲ್. ಎಸ್. ಸಂಸ್ಥೆಯ ಕಾರ್ಯದ್ಯಕ್ಷರಾದ  ಎಂ. ಆರ್. ಕುಲಕಣರ್ಿಯವರು ವಿದ್ಯಾಥರ್ಿಗಳು ಯಾವುದಾದರೂ ಸಾಧನೆಯನ್ನು ಮಾಡುವಲ್ಲಿ ಅವರ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂಬುದಾಗಿ ಹೇಳಿದರು. 

   ಸಾಧನೆಗೈದ ವಿದ್ಯಾಥರ್ಿಗಳೆಲ್ಲರಿಗೂ ಬಹುಮಾನ ನೀಡಿ ಸತ್ಕರಿಸಲಾಯಿತು. ಈ ಕಾರ್ಯಕ್ರಮವನ್ನು ಪ್ರೋ. ಸೆಜಲ್ ಬಾಗಿ ಹಾಗೂ ಪ್ರೋ. ರೂಪಾಲಿ ಕುಲಕಣರ್ಿ ಸಂಯೋಜಿಸಿದ್ದರು. ಪ್ರೋ. ಶಾಮಲ ಪಾಟೀಲ ಅವರು ವಂದನಾರ್ಪಣೆಯನ್ನು ಮಾಡಿದರು.  ಕು. ದರ್ಶನಾ ಹಾಗೂ ಸಂಪದಾ ನಿರೂಪಿಸಿದರು.  ಈ ಕಾರ್ಯಕ್ರಮಕ್ಕೆ ಎಲ್ಲ ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗ ಎಲ್ಲ ವಿದ್ಯಾಥರ್ಿ/ವಿದ್ಯಾಥರ್ಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.