ಸಂಸ್ಕೃತಿ ಪರಂಪರೆಯ ಕುರಿತು ತಿಳಿಹೇಳಬೇಕು: ನಾವಲಗಟ್ಟಿ
ಲೋಕದರ್ಶನ ವರದಿ
ಮುನವಳ್ಳಿ 24: ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಸೇವಾ ಕಾರ್ಯಗಳ ಜೊತೆಗೆ ಮೌಲ್ಯಗಳನ್ನು ಬೆಳೆಸಲು ಸೂಕ್ತ ಕಾರ್ಯಕ್ರಮ, ವಿವಿಧ ಶಿಬಿರಗಳನ್ನು ಹಮ್ಮಿಕೊಂಡು ನಮ್ಮ ಸಂಸ್ಕೃತಿ ಪರಂಪರೆಯ ಕುರಿತು ತಿಳಿಹೇಳಬೇಕು. ಮೌಲ್ಯಗಳನ್ನು ಬೆಳೆಸಬೇಕೆಂದು ಪ್ರೊ. ಪಿ.ವಿ.ಮೊಹರೆ ಹೇಳಿದರು.
ಅವರು ಮೇ. 23 ರಂದು ರಾತ್ರಿ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಜೈಂಟ್ಸ್ ಗ್ರೂಪ್ ಹಾಗೂ ರಾಣಿ ಚನ್ನಮ್ಮ ಸಹೇಲಿ ವತಿಯಿಂದ ಜರುಗಿದ ಗುರುವಂದನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಬಸವಸೇನೆ ಗೌರವಾಧ್ಯಕ್ಷ ಉಮೇಶ ಬಾಳಿ ಮಾತನಾಡಿ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಗಳಿಸಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು. ಜೈಂಟ್ಸ್ ಗ್ರೂಪ್ ಅಧ್ಯಕ್ಷ ಡಾ. ಎಂ.ಬಿ.ಅಷ್ಟಗಿಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವಿ.ಬಿ.ನಾಡಗೌಡ್ರ, ಬಿ.ಬಿ.ನಾವಲಗಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೈಂಟ್ಸ್ ಗ್ರೂಪ್ ರಾಜ್ಯಾಧ್ಯಕ್ಷ ಮೋಹನ ಸವರ್ಿ, ಸಹೇಲಿ ಅಧ್ಯಕ್ಷೆ ಗೌರಿ ಜಾವೂರ, ಪುಷ್ಪಾ ಸವರ್ಿ, ಸಂಜೀವಕುಮಾರ ತುಳಜಣ್ಣವರ, ಜಯಶ್ರೀ ಕುಲಕಣರ್ಿ ಶಿವಾಜಿ ಮಾನೆ, ಅಶೋಕ ರೇಣಕೆ, ವಿರಾಜ ಕೊಳಕಿ, ರಮೇಶ ಗಂಗಣ್ಣವರ, ಅರುಣಗೌಡ ಪಾಟೀಲ, ವೈ.ಪಿ.ರಾಮಜಾರ, ಬಿ.ಎಂ.ಅಂಗಡಿ, ಶಿವಕುಮಾರ ಕರೀಕಟ್ಟಿ, ಸವಿತಾ ಬಾಳಿ, ಅನುರಾಧಾ ಬೆಟಗೇರಿ, ಮಧು ಕಲಾಲ, ನಿರ್ಮಲಾ ಗದ್ವಾಲ, ಸುಮಾ ಯಲಿಗಾರ, ಅನ್ನಪೂರ್ಣ ಲಂಬೂನವರ, ಜ್ಯೋತಿ ಯಲಿಗಾರ ಸೇರಿದಂತೆ ಜೈಂಟ್ಸ್ ಗ್ರೂಪ್ ಸದಸ್ಯರು ಇದ್ದರು. ಬಿ.ಬಿ.ಹುಲಿಗೊಪ್ಪ ಸ್ವಾಗತಿಸಿದರು. ವೀರಣ್ಣ ಕೊಳಕಿ ನಿರೂಪಿಸಿದರು.