ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ

ಧಾರವಾಡ15: ನಗರದ ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ ಹಾಗೂ ರಥೋತ್ಸವ ಮೇ. 18ರಂದು ಶ್ರೀ 108 ಶ್ರೀ ವಿಷ್ಣು ತೀರ್ಥ ಶ್ರೀಪಾದಂಗಳವರ ಶ್ರೀಕ್ಷೇತ್ರ ಮಾದಿನೂರ ಇವರಿಂದ ಪ್ರತಿಷ್ಠಾಪಿಸಲ್ಪಟ್ಟ ಧಾರವಾಡದ ಶ್ರೀ ಲಕ್ಚ್ಮೀನರಸಿಂಹ ದೇವರ ದೇವಸ್ಥಾನ ರವಿವಾರಪೇಟ, ಗಾಂಧಿಚೌಕ, ಧಾರವಾಡದಲ್ಲಿ ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ ಕಾರ್ಯಕ್ರಮ ಪ್ರತಿ ಸಲದಂತೆ ಇದೇ ವೈಶಾಖ ಶು|| ದಶಮಿ ಮೇ. 14ರಂದು ಲಕ್ಷೀನರಸಿಂಹ ಜಯಂತಿ ಪ್ರಯುಕ್ತ ಕಲ್ಯಾಣೋತ್ಸವ ಪ್ರಾರಂಭವಾದ ಹಿನ್ನಲೆಯಲ್ಲಿ ಮೇ. 16ರಂದು ಗುರುವಾರ ಸಾಯಂಕಾಲ 6.00ಘಂಟೆಗೆ ಪಲ್ಲಕ್ಕಿ ಉತ್ಸವ, ಮೇ. 17ರಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮತ್ತು ಸಹಸ್ರಶಂಖ ಕ್ಷೀರಾಭಿಷೇಕ ಜರಗುವುದು. ಅದರಂತೆ ಮೇ. 18ರಂದು ಶನಿವಾರ ಬೆಳಿಗ್ಗೆ 9ಘಂಟೆಗೆ ರಥೋತ್ಸವ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತಾಭಿಮಾನಿಗಳು ಈ ದೇವತಾಕಾರ್ಯದಲ್ಲಿ ಭಾಗವಹಿಸಿ ಹರಿ ಕೃಪೆಗೆ ಅನುಗ್ರಹಿತರಾಗಬೇಕೆಂದು ಹಾಗು ನರಸಿಂಹ ಜಯಂತಿ ಮತ್ತು ಹುಣ್ಣಿಮೆ ದಿನದಂದು ಜಡ್ಡಿ  ಹನುಮಂತದೇವರ ದೇವಸ್ಥಾನ ಹೊಸಯಲ್ಲಾಪುರದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ದೀಲಿಪ ಟೋಣಪಿ ಅರ್ಚಕರು ಲಕ್ಷ್ಮೀನರಸಿಂಹ ದೇವಸ್ಥಾನ ಗಾಂಧಿಚೌಕ, ಧಾರವಾಡ. ಇವರು ಆದರ ಪೂರ್ವಕವಾಗಿ ಪ್ರಾಥರ್ಿಸಿದ್ದಾರೆ.