ಲಕ್ಷ್ಮೀ ಸಹಕಾರಿ ಬ್ಯಾಂಕ್ ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಲೋಕದರ್ಶನವರದಿ

ಗುಳೇದಗುಡ್ಡ28: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘ ಲಕ್ಷ್ಮೀ ಸಹಕಾರಿ ಬ್ಯಾಂಕಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಸತತ ಆರನೇ ಬಾರಿಗೆ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಅಧ್ಯಕ್ಷರಾಗಿ, ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಕಮಲಕಿಶೋರ  ಮಾಲಪಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

     ಶುಕ್ರವಾರ ಬೆಳಿಗ್ಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರ ಶೀಲವಂತ, ಉಪಾಧ್ಯಕ್ಷ ಸ್ಥಾನಕ್ಕೆ ಕಮಲು ಮಾಲಪಾಣಿ ನಾಮಪತ್ರ ಸಲ್ಲಿಸಿದ್ದರು, ಯಾವ ನಾಮಪತ್ರಗಳು ಸಲ್ಲಿಕೆಯಾಗದಿರುವದರಿಂದ ಅಧ್ಯಕ್ಷರಾಗಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಉಪಾಧ್ಯಕ್ಷರಾಗಿ ಕಮಲು ಮಾಲಪಾಣಿ ಅವಿರೊಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ ಜಿ.ಎಂ.ಕುಲಕಣರ್ಿ ತಿಳಿಸಿದ್ದಾರೆ. 

      ವಿಜಯೋತ್ಸವ: ಪಟ್ಟಣದ ಲಕ್ಷ್ಮೀ ಸಹಕಾರಿನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಸತತ ಆರನೇ ಬಾರಿಗೆ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಅಧ್ಯಕ್ಷರಾಗಿ, ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಕಮಲಕಿಶೋರ  ಮಾಲಪಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. 

     ಈ ಸಂದರ್ಭದಲ್ಲಿ ಮಾಜಿ ಚೇರಮನ್ ಸಂಪತ್ಕುಮಾರ  ರಾಠಿ, ವೀರಣ್ಣ ಕುರಹಟ್ಟಿ, ಸಂಜಯ ಕಾರಕೂನ, ಸಂಗಣ್ಣ ಹುನಗುಂದ, ಮೃತ್ಯುಂಜಯ ಕರನಂದಿ, ಸಂಗಪ್ಪ ಆಲೂರ, ದೀಪಕ ನೇಮದಿ, ಗಣೇಶ ಶೀಲವಂತ, ವಿಜಯಾ ಸಾವಳಗಿಮಠ, ಲಕ್ಷ್ಮೀಬಾಯಿ ರೂಡಗಿ, ರವೀಂದ್ರ ಅಲದಿ, ರಂಗಪ್ಪ ಶೇಬಿನಕಟ್ಟಿ, ಶ್ರೀಕಾಂತ ಭಾವಿ, ಸಿದ್ದು ಅರಕಾಲಚಿಟ್ಟಿ ಸೇರಿದಂತೆ ಇತರರು ಇದ್ದರು.