ಲಕ್ಷ್ಮೀ ಸಹಕಾರಿ ಬ್ಯಾಂಕ್ ಚುನಾವಣೆ: 5 ನಾಮಪಪತ್ರ ಸಲ್ಲಿಕೆ

ಲೋಕದರ್ಶನವರದಿ

ಗುಳೇದಗುಡ್ಡ03: ಪಟ್ಟಣದ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಆಡಳಿತ ನಿದರ್ೇಶಕ ಮಂಡಳಿಯ ಚುನಾವಣಾ ಪ್ರಕ್ರಿಯೇ ಫೆ.2 ರಿಂದ ಆರಂಭವಾಗಿದ್ದೂ ಸೋಮವಾರದವರೆಗೆ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಅಧಿಕಾರಿಗಳೂ ಆಗಿರುವ ಗುಳೇದಗುಡ್ಡ ತಹಸೀಲ್ದಾರ ಜಿ.ಎಂ. ಕುಲಕಣರ್ಿ ತಿಳಿಸಿದ್ದಾರೆ. 

     ಸಂತೋಷ ಶೇಖರಪ್ಪ ನಾಯನೇಗಲಿ (ಸಾ), ಶ್ರೀಕಾಂತ ಮಲಜಿ (ಸಾ) ಸುಧೀರ ನಾಗಪ್ಪ ಗುಡ್ಡದ (ಸಾ), ಸೋಮಶೇಖರ ರಂಜನಗಿ (ಸ), ಸತೀಶ  ಅಜರ್ುನಪ್ಪ ರಾಂಪೂರ (ಹಿಂ.ವರ್ಗ ಅ) ಹೀಗೆ ಒಟ್ಟು 5 ನಾಮಪತ್ರಗಳ ಸಲ್ಲಿಕೆಯಾಗಿದ್ದೂ ಇವರೆಲ್ಲ ಸಂತೋಷ ನಾಯನೇಗಲಿ ಗುಂಪಿನವರೆಂದು ಹೇಳಲಾಗುತ್ತಿದೆ.

  ಒಟ್ಟು ಚುನಾವಣೆ ಮೂಲಕ ಆಯ್ಕೆ ಮಾಡಬೇಕಾದ ಸ್ಥಾನಗಳ ಸಂಖ್ಯೆ 17. ಸಾಮಾನ್ಯ ಕ್ಷೇತ್ರದಿಂದ 11, ಪ.ಜಾ.ದಿಂದ 01, ಪ.ಪಂ.ದಿಂದ 01, ಹಿಂ.ವರ್ಗ 'ಅ' ದಿಂದ 02, ಮಹಿಳಾ 02, ಹೀಗೆ ಒಟ್ಟು 17  ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೇ ದಿ.2ರಿಂದ ಅರಂಭವಾಗಿದ್ದೂ ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕ 8 (ಮಧ್ಯಾಹ್ನ 3 ಗಂಟೆವರೆಗೆ) ಆಗಿರುತ್ತದೆ. ನಾಮಪತ್ರ ಪರಿಶೀಲನೆ ದಿ. 9,  ಅರ್ಹ ಉಮೇದುವಾರರ ಪಟ್ಟಿ ಪ್ರಕಟನೆ ದಿ.9, ಉಮೇದುವಾರಿಕೆ ವಾಪಸ್ ಪಡೆಯುವ ದಿ.10 (ಮದ್ಯಾಹ್ನ 3 ರವರೆಗೆ), ಅಂತಿಮ ಅರ್ಹ ಉಮೇದುವಾರರಿಗೆ ಚಿಹ್ನೆ ಹಂಚುವುದು ದಿ.10, ಅರ್ಹ ಉಮೇದುವಾರರ ಚಿಹ್ನೆಯೊಂದಿಗೆ ಪಟ್ಟಿ ಪ್ರಕಟನೆ ದಿ. 12, ಚುನಾವಣೆ ದಿ. 16 ರಂದು  ಮುಂಜಾನೆ 9 ರಿಂದ ಸಾಯಂಕಾಲ 4 ಗಂಟೆಯವರೆಗೆ ಜರುಗುವುದು. ಸ್ಥಳ ಬಾಲಕರ ಪದವಿಪೂರ್ವ ಕಾಲೇಜು, ಗುಳೇದಗುಡ್ಡ.  ಮತಎಣಿಕೆ ಮತದಾನ ನಂತರ, ಚುನಾವಣೆ ಫಲಿತಾಂಶ ಘೋಷಣೆ ದಿ.16 ರಂದು  ಮತಎಣಿಕೆ ಮುಗಿದ ನಂತರ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಯಾಗುವ ಸಂಭವ ಖಚಿತ: 

ಚುನಾವಣೆಗೆ ಎರಡು ಗುಂಪುಗಳು ಸ್ಪಧರ್ಿಸುವ ಸಂಭವವಿದ್ದೂ, ಮಾಜಿಶಾಸಕ ರಾಜಶೇಖರ ಶೀಲವಂತ ಅವರ ಗುಂಪಿಗೆ ಸಂತೋಷ ನಾಯನೇಗಲಿ ಅವರ ಗುಂಪು ಪ್ರತಿಸ್ಪಧರ್ೆ ನೀಡುವ ಎಲ್ಲ ಸಾಧ್ಯತೆಗಳು ಕೇಳಿ ಬಂದಿವೆ.  ಒಟ್ಟು 17 ಸ್ಥಾನಗಳಿಗೆ 17 ಉಮೇದುವಾರರನ್ನು ಈ ಬಾರಿ ಸಂತೋಷ ನಾಯನೇಗಲಿ ನಿಲ್ಲಿಸುವ ಸಾಧ್ಯತೆಗಳಿವೆ.