ಶಾಲೆಗೆ ಶಾಸಕ ಸವದಿ ದಿಢೀರ್ ಭೇಟಿ: ಶಾಶ್ವತ ಕಟ್ಟಡದ ಭರವಸೆ

ಲೋಕದರ್ಶನರವದಿ

ಮಹಾಲಿಂಗಪುರ೨೬ : ಸ್ಥಳೀಯ ಮೂರಾಜಿ  ದೇಸಾಯಿ ವಸತಿ ಶಾಲೆಗೆ ಶಾಸಕ ಸಿದ್ದು ಸವದಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಮೂಲಭೂತ ಸೌಲಭ್ಯಗಳು, ಊಟ,  ವಸತಿ ಕೋಣೆ,  ಕಲಿಕಾ ಕೊಠಡಿ, ಶೌಚಾಲಯ ಮತ್ತು ಶುಚಿತ್ವ ಪ್ರತಿಯೊಂದನ್ನೂ ಕೂಲಂಕುಷವಾಗಿ ಪರಿಶೀಲಿಸಿದರು.  

 ನಾಳಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಕಾರ್ಯ ನಿವರ್ಾಹಕ ಅಧಿಕಾರಿ ಗಮನಕ್ಕೆ ತಂದು ಶಾಶ್ವತ ಕಟ್ಟಡದ ಜೊತೆ ಇತರೆ ಸೌಕರ್ಯಗಳನ್ನು ಶೀಘ್ರವಾಗಿ ಒದಗಿಸುವ ಭರವಸೆ ನೀಡಿದರು.  

       ತೇರದಾಳ ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಜಿ. ಎಸ್. ಗೊಂಬಿ, ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ, ಸದಸ್ಯರಾದ ರಾಜು ಚಮಕೇರಿ, ಚನ್ನಬಸು ಯರಗಟ್ಟಿ  ಹಾಗೂ ಶಿವು ಹುಣಶ್ಯಾಳ, ವಿಷ್ಣುಗೌಡ ಪಾಟೀಲ, ಶಾಲೆಯ ಪ್ರಾಂಶುಪಾಲ ಎಸ್. ಬಿ. ನಂದೆಪ್ಪಗೋಳ, ಶಿಕ್ಷಕ ಅಶೋಕ  ಬಕರೆ, ಮುಖ್ಯೋಪಾಧ್ಯಾಯಿನಿ ಡಬ್ಲ್ಯೂ, ಜಿ ಅಲ್ಲಾಖಾನ್ ಮತ್ತು ಇತರರು ಇದ್ದರು.