ರಾಜ್ಯಪಾಲರ ವಿರುದ್ಧ ಶಾಸಕ ಎಚ್ ಕೆ ಪಾಟೀಲ ಆಕ್ರೋಶ

ವಿಜಯಪುರ 27: ಬಿಜೆಪಿಗೆ ಸಕರ್ಾರ ರಚಿಸುವ ಅವಕಾಶ ನೀಡುವ ಮೂಲಕ ರಾಜ್ಯಪಾಲ ವಜೂಭಾಯಿ ವಾಲಾ ಅವರು ಸಂವಿಧಾನಕ್ಕೆ ಅಪಚಾರ ಎಸಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ್  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

    ಶನಿವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಇದು ನೋವು ಉಂಟು ಮಾಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮನ್ನು ಬೆಂಬಲಿಸುವ 111 ಶಾಸಕರ ಪಟ್ಟಿಯನ್ನು ಹಾಜರು ಪಡಿಸಿಲ್ಲ. ರಾಜ್ಯಪಾಲರು ಎಲ್ಲರಿಗೂ ಕಾಣುವಂತೆ ಸಂವಿಧಾನದ ನಿಯಮ ಉಲ್ಲಂಘಿಸಿದ್ದು, ಇದು ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದರು. 

ಕಾಂಗ್ರೆಸ್ ಪಕ್ಷದಿಂದ ಸಕರ್ಾರ ರಚಿಸಲು ಹಕ್ಕು ಮಂಡಿಸಿರಲಿಲ್ಲ. ಆದರೂ, ರಾಜ್ಯಪಾಲರು ಯಾಕೆ ತರಾತುರಿ ಮಾಡಿದ್ದಾರೆ? ಎಂದು ಪ್ರಶ್ನಿಸಿರುವ ಅವರು,  ರಾಜ್ಯಪಾಲರು ತಮ್ಮ ನಿಧರ್ಾರದ ಬಗ್ಗೆ ರಾಜ್ಯದ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಸೋಮವಾರ ವಿಶ್ವಾಸಮತವಿದೆ. ನಮ್ಮ ಕೆಲ ಶಾಸಕರು ಮೋಸ ಮಾಡಿ ಹೋಗಿದ್ದಾರೆ. ಅವರನ್ನು ಆದಷ್ಟು ಬೇಗ ಸ್ಪೀಕರ್ ಅನರ್ಹಗೊಳಿಸಬೇಕು. ಈಗಾಗಲೇ ಈ ವಿಷಯದಲ್ಲಿ ವಿಳಂಬವಾಗಿದೆ ಎಂದು ಪಾಟೀಲ್ ಅಭಿಪ್ರಾಯ ಪಟ್ಟರು