ಲೋಕದರ್ಶನ ವರದಿ
ರಾಣೇಬೆನ್ನೂರು 02: ನಗರದ ಶ್ರೀ ಮೌನೇಶ್ವರ ದೇವಸ್ಥಾನ ಕಲ್ಯಾನಮಂಟಪದಲ್ಲಿ ನಡೆದ ಭಗವಾನ್ ಶ್ರೀ ಮೌನೇಶ್ವರ ಸ್ವಾಮಿಯ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ, ಕ್ಷೇತ್ರ ಶಾಸಕ ಅರುಣಕುಮಾರ ಪೂಜಾರ ಮತ್ತು ಬಿಜೆಪಿ ಮುಖಂಡ ಚೋಳಪ್ಪ ಕಸವಾಳ ಅವರಿಗೆ ಸಮಿತಿಯ ಪರವಾಗಿ ಅಧ್ಯಕ್ಷ ಓಂಕಾರಪ್ಪ ಅಕರ್ಾಚಾರಿ ಅವರು ಸನ್ಮಾನಿಸಿ ಗೌರಿವಿಸಿದರು.
ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಮುಖಂಡರು ಈಗಾಗಲೇ ಆವರಣದಲ್ಲಿ ಪ್ರೌಢಶಾಲೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಬೇರೆಕಡೆ ಸ್ಥಾಳಾಂತರಿಸಬೇಕಾಗಿದೆ. ಮಾಜಿ ವಿಧಾನಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರಿಗೆ ಮಾಡಿಕೊಳ್ಳಲಾದ ಮನವಿ ಮೇರೆಗೆ ವೀರಭದ್ರೇಶ್ವರ ನಗರದಲ್ಲಿ(ಸವರ್ೆ.ನಂ.309ಬ, ಪ್ಲಾಟ್ ನಂ.72ರಲ್ಲಿ) ನಗರದಲ್ಲಿ 21ಗುಂಟೆ 2ಆಣೆ ಬೈಲು ಜಾಗೆಕೊಡಲು ನಗರಸಭೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು 26-3-2018ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸ್ ಮಾಡಿದ್ದಾರೆ.
ಈ ಸ್ಥಳವು ಸಾರ್ವಜನಿಕ ಶಿಕ್ಷಣಕ್ಕಾಗಿ ಮೀಸಲಿಟ್ಟ ನಿವೇಶನವಾಗಿದೆ. ದಯಾಳುಗಳಾದ ತಾವುಗಳು ಸದರಿ ಜಾಗೆಯನ್ನು ನಮ್ಮ ಪ್ರೌಢಶಾಲೆಗೆ ಮಂಜೂರು ಮಾಡಿಕೊಟ್ಟು ಸರ್ವಜನಾಂಗದ ಮಕ್ಕಳಿಗೆ ಶಿಕ್ಷಣವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಜಕಣಾಚಾರ ಅರ್ಕಾಚಾರಿ, ಕೃಷ್ಣಾಚಾರ ಅರ್ಕಾಚಾರಿ, ರಾಮಪ್ಪ ಅರ್ಕಾಚಾರಿ, ಬಸವರಾಜ ಬಡಿಗೇರ, ನಾಗೇಂದ್ರಪ್ಪ ಅಕರ್ಾಚಾರಿ, ಪರಮೇಶ್ವರಾಚಾರ ಬಡಿಗೇರ, ಮಾರ್ತಾಂಡಪ್ಪ ಕಮ್ಮಾರ, ಫಕ್ಕೀರೇಶ ಬಡಿಗೇರ, ನಾಗರಾಜ ಬಡಿಗೇರ, ವೀರಣ್ಣ ಅರ್ಕಾಚಾರಿ ಸೇರಿದಂತೆ ಸಮಾಜದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.