ತಬ್ಲಿಘಿ ಧರ್ಮಸಭೆಗೆ ಹೋಗಿ ಬಂದವರ ವಿರುದ್ಧ ಶಾಸಕ ಸೋಮಶೇಖರ ರೆಡ್ಡಿ ಕಿಡಿ

ಬಳ್ಳಾರಿ05: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲಿಘಿ ಧರ್ಮಸಭೆಗೆ ಹೋಗಿ ವಾಪಸ್ ಬಳ್ಳಾರಿಗೆ ಬಂದವರ ವಿರುದ್ಧ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಕಿಡಿಕಾರಿದ್ದಾರೆ. 

      ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ, ಚಿಕಿತ್ಸೆಗೆ ಸಹಕಾರ ಕೊಡಲ್ಲ ಅಂದ್ರೆ ಇವರದು ಅದೆಂಥಾ ಮನಸ್ಥಿತಿ ಅಂತ ನೀವೇ ಅರ್ಥ ಮಾಡ್ಕೊಳಿ. ಇಂತಹ ಟೆರರಿಸ್ಟ್ ಮನಸ್ಥಿತಿಗಳಿಗೆ ಏನು ಮಾಡಬೇಕು? ಎಲ್ಲರೂ ಟೆರರಿಸ್ಟ್ ಮನಸ್ಥಿತಿಯವರು ಅಂತಾ ನಾನು ಹೇಳಲ್ಲ. ಕೆಲವರು ಮೇಲೆ ಒಳ್ಳೆಯವರಂತೆ ಕಂಡ್ರೂ ಮನಸ್ಥಿತಿಗಳು ಟೆರರಿಸ್ಟ್ಗಳ ರೀತಿಯೇ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು. 

     ಸಸತಮಿಳುನಾಡು, ಆಂಧ್ರಪ್ರದೇಶದಲ್ಲಿ ಈ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗಿದೆ. ಒಂದು ವೇಳೆ ಇವರು ಚಿಕಿತ್ಸೆಗೆ ಸಹಕರಿಸಿದ್ದರೆ ಈ ದೇಶದಲ್ಲಿ ಇಷ್ಟೊಂದು ಕೇಸ್ಗಳು ದಾಖಲಾಗುತ್ತಿರಲಿಲ್ಲ. ಯಾರು ಏನೇ ಮಾಡಿದ್ರೂ ಭಗವಂತ ನಮ್ಮನ್ನು ಕಾಪಾಡುತ್ತಾನೆ. ಅದಕ್ಕೆ ಮೋದಿ ಹೇಳಿದಂತೆ ದೀಪ ಹಚ್ಚುತ್ತೇವೆ. ಕೆಲವು ಕೋಮುವಾದಿಗಳು ದೀಪ ಹಚ್ಚಲ್ಲ. ಆದ್ರೆ, ನಾವು ಹಚ್ಚದಿರುವವರ ಪರವಾಗಿ ದೀಪ ಹಚ್ಚಿ ಕವರ್ ಮಾಡ್ತೇವೆ. ನಮ್ಮ ಮನೆಯಲ್ಲಿ 150 ದೀಪ ಹಚ್ಚುತ್ತೇವೆ ಎಂದರು. 

ಉದ್ದೇಶ ಪೂರ್ವಕವಾಗಿಯೇ ಅವರು ಹೀಗೆ ಮಾಡ್ತಿದಾರೆ. ಬೇರೆಯವರಿಗೆ ರೋಗ ಹರಡಬೇಕು ಅಂತಾನೇ ಹೀಗೆ ಮಾಡ್ತಿದ್ದಾರೆ. ಜಮಾತ್ ಮರ್ಕಜ್ನಿಂದ ಈ ದೇಶಕ್ಕೆ ಸಾಕಷ್ಟು ಹಾನಿಯಾಗಿದೆ. ಇಲ್ಲಾಂದ್ರೆ ನಮ್ಮ ದೇಶದಲ್ಲಿ ಸಾವಿರದ ಕೆಳಗೆ ಸೋಂಕಿನ ಸಂಖ್ಯೆ ಇತರ್ಾ ಇತ್ತು ಎಂದು ಕಿಡಿಕಾರಿದರು.