ಗಂಜಿಕೇಂದ್ರಕ್ಕೆ ಶಾಸಕ ಬೊಮ್ಮಾಯಿ ಭೇಟಿ: ಪರಿಶೀಲನೆ

ಲೋಕದರ್ಶನವರದಿ

ಶಿಗ್ಗಾವಿ : ಪಟ್ಟಣದಲ್ಲಿ ತೀವ್ರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮತ್ತು ಜಲಾವೃತಗೊಂಡ ಕುಟುಂಬದ ಸದಸ್ಯರು ಇರುವ ಗಂಜಿಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಅಗತ್ಯ ಕ್ರಮಕೈಗೊಳ್ಳಲು ಶಾಸಕ ಬಸವರಾಜ ಬೊಮ್ಮಾಯಿ ಸೂಚಿಸಿದರು.     

 ಈ ಸಂದರ್ಭದಲ್ಲಿ ಶಿಗ್ಗಾವಿ ತಹಶೀಲ್ದಾರ ಚಂದ್ರಶೇಖರ ಗಾಳಿ, ಪುರಸಭೆಯ ಮುಖ್ಯಾಧಿಕಾರಿ ಗುಡದಾರಿ, ಶಿವಾನಂದ ಮ್ಯಾಗೇರಿ, ರೇಣುಕನಗೌಡ ಪಾಟೀಲ, ಪಟ್ಟಣದ ಪುರಸಭೆಯ ಸದಸ್ಯರು ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.