ಲೋಕದರ್ಶನ ವರದಿ
ಯರಗಟ್ಟಿ 5: ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾತರ್ಿಕ ಮಾಸದ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಗ್ರಾಮದ ಮಹಿಳೆಯರು ತಂಡೋಪ ತಂಡವಾಗಿ ಹೊಸ ಉಡುಪುಗಳನ್ನು ಧರಿಸಿಕೊಂಡು ದೇವಸ್ಥಾನಕ್ಕೆ ಆಗಮಿಸಿ ಹಣತೆಗೆ ಎಣ್ಣಿ ಕಾಕುವುದರ ಮೂಲಕ ದೀಪವನ್ನು ಹಚ್ಚಿ ತಮ್ಮ ಇಷ್ಠಾರ್ಥಗಳನ್ನು ಈಡೇರಿಸುವಂತೆ ವೀರಭದ್ರೇಶ್ವರನಲ್ಲಿ ಬೇಡಿಕೊಂಡರು. ನಂತರ ಮಹಾ ಪ್ರಸಾದ
ಜರುಗಿತು.
ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಮಾಜಿ ಪ್ರಧಾನ ಅಶೋಕ ಹಾದಿಮನಿ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ, ಎಮ್.ಬಿ.ವಾಲಿ, ವಿಜಯ ಮರಡಿ, ರಾಜೇಂದ್ರ ವಾಲಿ, ಶಿವಲಿಂಗಪ್ಪ ವಾಲಿ, ಶಿವಾನಂದ ಕರ್ಜಗಿಮಠ, ಈರಣ್ಣ ಮದ್ದಾನಿ, ಶಿವಾನಂದ ಪಟ್ಟಣಶೆಟ್ಟಿ, ಕುಮಾರ ಹಿರೇಮಠ, ಶ್ರೀಕಾಂತ ಹೊರಟ್ಟಿ, ಶ್ರೀದರ ಉಪ್ಪಿನ, ಚಿದಾನಂದ ಉಪ್ಪಿನ, ಸೋಮು ಅಲ್ಲನ್ನವರ, ಐ, ಜಿ. ಬೆಣ್ಣಿ, ದೆವೇಂದ್ರ ಪಟ್ಟೇದ, ಬಸುರಾಜ ಬಳಿಗಾರ, ಎಮ್.ಎಸ್.ಚಟ್ಟಿ, ಶಿವಾನಂದ ಹಂಜಿ ಮುಂತಾದವರಿದ್ದರು.