ಅನ್ನಪೂರ್ಣಾ ಸ್ಮರಣೋತ್ಸವದಲ್ಲಿ ಮಳಗಲಿಯವರ 7 ಕೃತಿಗಳ ಲೋಕಾರೆ್ಣ
Launch of seven works by Malagali at the Annapurna commemorative event
ಬೆಳಗಾವಿ 19; ಅನ್ನಪೂರ್ಣಾ ಮಳಗಲಿ ಅವರ ಸ್ಮರಣೋತ್ಸವದಲ್ಲಿ ಅವರ ಪತಿ ಅಶೋಕ ಮಳಗಲಿ ಅವರ 7 ಕೃತಿಗಳ ಲೋಕಾರೆ್ಣಗೊಂಡಿದ್ದು ಅನುಕರಣೀಯವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನೀವ್ರತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ಹೇಳಿದರು.ಅವರಿಂದು ಬೆಳಗಾವಿಯಲ್ಲಿ ದಿ.ಅನ್ನಪೂರ್ಣಾ ಮಳಗಲಿ ಅವರ ಸ್ಮರಣೋತ್ಸವದಲ್ಲಿ ಮಾತನಾಡಿ ಸದಾ ಹಸನ್ಮುಖಿಯಾಗಿದ್ದ ದೇಹದಾನಿ ದಿ.ಅನ್ನಪೂರ್ಣಾ ಅವರು ಪತಿಗೆ ಸ್ಪೂರ್ತಿದಾಯಕವಾಗಿದ್ದರು.ನಿತ್ಯ ನೂತನ ದಾಂಪತ್ಯ ಬದುಕು ಅವರದಾಗಿತ್ತು,ಅವರ ಸಾವಿನಲ್ಲೂ ಸ್ಪೂರ್ತಿ ಪಡೆದು 7 ಕೃತಿಗಳ ಲೋಕಾರೆ್ಣ ಮಾಡಿ ಸಾವಿನ ನಂತರವೂ ಅವರು ಬದುಕಿದ್ದಾರೆ ಎಂಬುದನ್ನು ಅಶೋಕ್ ಮಳಗಲಿ ಸಾಬೀತುಪಡಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಕೃತಿಗಳ ಲೋಕಾರೆ್ಣ ಗೊಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೋ.ಸಿದ್ದು ಯಾಪಲಪರವಿ ಮಾತನಾಡಿ ಸಂಬಂಧಗಳು ಹಾಳಾಗಿರುವ, ಸೌಜನ್ಯವನ್ನು ಮೆರೆಯುತ್ತಿರುವ ಈ ದಿನ ಮಾನಗಳಲ್ಲಿ ಸಾವಿನಲ್ಲೂ ಸಾರ್ಥಕತೆ ಮೆರೆದ, ಸಮೂಹ ಪ್ರಜ್ಞೆಯಲ್ಲಿ ಬದುಕಿದ ಮಳಗಲಿ ದಂಪತಿಗಳದು ಮಾದರಿ ದಾಂಪತ್ಯ ಎಂದರು.ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಾತು ಮೌನ ಮತ್ತು ಅಪವಾದದ ಸುಳಿಯಲ್ಲಿ ಆದರ್ಶದ ಒರತೆ ಕೃತಿಗಳ ಕುರಿತು ಡಾ. ನಿರ್ಮಲ ಬಟ್ಟಲ ಮಾತನಾಡಿದರು.
ಅಂತರಂಗದ ಬೆಳಕು ಮತ್ತು ಲಿಂಗಾಯತ ಧರ್ಮದ ತ್ರಿವಿಧ ತತ್ವಗಳು ಕೃತಿಗಳ ಕುರಿತು ಡಾ.ಅವಿನಾಶ ಕವಿ ಮಾತನಾಡಿದರು. ಕಾಲಾತೀತ ಕಲ್ಯಾಣ ಕೃತಿ ಕುರಿತು ಡಾ.ಎಚ್.ಐ.ತಿಮ್ಮಾಪೂರ ಮಾತನಾಡಿದರು.ಅರಬರ ನಾಡಿನ ಅದ್ಭುತಗಳು ಕೃತಿ ಕುರಿತು ಸಾಹಿತಿ ಯು.ರು.ಪಾಟೀಲ ಮಾತನಾಡಿದರು. ಲಂಡನ್ ನಿಂದ ರೋಮವರೆಗೆ ಸ್ಮರಣೆಯ ಪಯಣ ಕೃತಿ ಕುರಿತು ಡಾ.ಪಿ.ಜಿ.ಕೆಂಪಣ್ಣವರ ಮಾತನಾಡಿದರು.ಹಿರಿಯ ಸಾಹಿತಿ, ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಹಿರಿಯ ವೈದ್ಯ ಡಾ.ಎಂ.ಎಲ್.ತುಕ್ಕಾರ,ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಅಶೋಕ ಮಳಗಲಿ ಸ್ವಾಗತಿಸಿದರು.ಶರಣೆ ಪ್ರೇಮಕ್ಕ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ನಂತರ ಅಶೋಕ ಮಳಗಲಿ ವಿರಚಿತ ಹೊನ್ನು ಮಣ್ಣಾದಾಗ ನಾಟಕ ಪ್ರದರ್ಶನಗೊಂಡಿತು.ನಾಟಕ ಅಕಾಡೆಮಿ ಸದಸ್ಯ ಬಾಬಾಸಾಹೇಬ ಕಾಂಬಳೆ ನಿರ್ದೇಶಿಸಿದರು. ಪ್ರೋ.ಬಿ.ಆರ್. ಪೋಲಿಸ್ ಪಾಟೀಲ್ ಉದ್ಘಾಟಿಸಿದರು. ರಂಗಾಯಣ ಸಂಚಾಲಕ ಝಾಕೀರ್ ನದಾಫ್ ಅಧ್ಯಕ್ಷತೆ ವಹಿಸಿದ್ದರು.ಶೀರೀಶ್ ಜೋಶಿ, ಚಂದ್ರಶೇಖರ್ ನವಲಗುಂದ, ಆನಂದ ಪುರಾಣಿಕ, ಮುರಿಗೆಪ್ಪ ಬಾಳಿ, ಚಂದ್ರ್ಪ ಬೂದಿಹಾಳ ಬಸವರಾಜ್ ಗಾರ್ಗಿ ಉಪಸ್ಥಿತರಿದ್ದರು.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 