ಲಾಠಿ ಪ್ರಹಾರ ನಡೆದ ಮಂಗಳವಾರ ಪಂಚಮಸಾಲಿಗಳ ಪಾಲಿಗೆ ಕರಾಳ ದಿನ: ಧರೆಪ್ಪ ಸಾಂಗ್ಲಿಕರ್
ಮಹಾಲಿಂಗಪುರ 12: ಬೆಳಗಾವಿ ಸುವರ್ಣಸೌಧ ಎದುರು ಪಂಚಮಸಾಲಿಯ 2ಎ ಬೇಡಿಕೆಗಾಗಿ ಕೂಡಲಸಂಗಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆದಾಗ ಸಮಾಜದ ಹಕ್ಕೋತ್ತಾಯವನ್ನು ಮೊಟಕುಗೊಳಿಸುವ ರೀತಿಯಲ್ಲಿ ಸರ್ಕಾರ ಪೊಲೀಸರಿಂದ ಲಾಟಿಚಾರ್ಜ್ ಮಾಡಿಸಿದ್ದು ಖಂಡನಾರ್ಹ ಮತ್ತು ಘಟನೆ ನಡೆದ ಮಂಗಳವಾರ ಪಂಚಮಸಾಲಿಗಳ ಪಾಲಿಗೆ ಕರಾಳ ದಿನವಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ್ ವಿಷಾದ ವ್ಯಕ್ತಪಡಿಸಿದರು.
ಗುರುವಾರ ಮುಂಜಾನೆ ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪಂಚಮಸಾಲಿಗಳ ಬೃಹತ ಪ್ರತಿಭಟನೆಯಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರ್ ಗೀರೀಶ್ ಸ್ವಾದಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ದೀಕ್ಷಾ ಮಲೆಗೌಡ, ಗೌಡ ಲಿಂಗಾಯತರಿಗೆ ಹಾಗೂ ಲಿಂಗಾಯತ ಒಬಿಸಿ ಪಂಗಡಗಳಿಗೆ ಮೀಸಲಾತಿ ಕಲ್ಪಿಸಬೇಕು. ಇದು ನಮ್ಮ ಸಮುದಾಯದ ಬಹಳ ದಿನಗಳ ಬೇಡಿಕೆಯಾಗಿದೆ ಎಂದರು.
ನಮ್ಮ ಹಕ್ಕನ್ನು ಕೇಳಿದರೆ ಸರ್ಕಾರ ನಮ್ಮ ಮೇಲೆ ಲಾಠಿ ಪ್ರಹಾರದಂತಹ ದೌರ್ಜನ್ಯ ನಡೆಸಿ ಸುಮಾರು ಸಾವಿರಾರು ಜನರಲ್ಲಿ ಕೆಲವರಂತೂ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ. 12ನೇ ಶತಮಾನದಲ್ಲಿ ಕೊಂಡಿ ಮಂಚಯ್ಯ ಲಿಂಗಾಯತರ ಹತ್ಯೆ ಮಾಡಿಸಿದ ರೀತಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯದ ಮೇಲೆ ಗದಾ ಪ್ರಹಾರ ನಡೆಸಿ ಪಂಚಮಸಾಲಿ ಸಮಾಜದ ಕಡು ವಿರೋಧಿಗಳಾಗಿದ್ದಾರೆ.ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪಂಚಮಸಾಲಿಗಳು ತಕ್ಕ ಪಾಠ ಕಲಿಸುವರು.
ಕಾನೂನನ್ನು ಕೈಗೆ ಎತ್ತಿಕೊಂಡು ದೌರ್ಜನ್ಯವೆಸಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯದ ಮತ್ತು ಶ್ರೀಗಳ ಕ್ಷಮೆಯಾಚಿಸಿ, ಅಮಾಯಕರ ಮೇಲಿನ ಪ್ರಕರಣಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸುವುದರೊಂದಿಗೆ, ಸಿಎಂ ಸೇರಿ ಪೋಲಿಸ್ ಮಹಾನಿರ್ದೇಶಕ (ಎಡಿಜಿಪಿ) ಆರ್ ಹಿತೇಂದ್ರ ರನ್ನು ವಜಾಗೊಳಿಸಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಲು ತಹಶೀಲ್ದಾರ್ ರಿಗೆ ಮನವಿ ನೀಡುವ ಮೂಲಕ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಗುರುವಾರ ಮುಂಜಾನೆ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತಾ ರೋಕೋ ನಡೆಸಿ ಸಿದ್ಧರಾಮಯ್ಯ ಸರ್ಕಾರದ ಧೋರಣೆ ಖಂಡಿಸಿ ಧಿಕ್ಕಾರ ಕೂಗಿದರು. ಒಂದು ಗಂಟೆ ಕಾಲ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಮುಂದೆ ಸಾಗದೆ ಪ್ರಯಾಣಿಕರು ಪರದಾಡಿದರು. ಇದನ್ನರಿತ ಪೋಲಿಸ್ ಇಲಾಖೆ ಹೋರಾಟಗಾರರಿಗೆ ಸಮಜಾಯಿಷಿ ನೀಡಿ ಅವರ ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಿದ್ದುಗೌಡ ಪಾಟೀಲ್ ಮಾತನಾಡಿದರು. ಡಾ. ಎ ಆರ್ ಬೆಳಗಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಪಂಡಿತ ಪೂಜಾರ, ಚೆನಬಸು ಹುರಕಡ್ಲಿ, ಚೆನಬಸು ಯರಗಟ್ಟಿ, ಹನಮಂತ ಕೊಣ್ಣೂರ, ಹನಮಂತ ಶಿರೋಳ, ಶ್ರೀಶೈಲಪ್ಪ ವಜ್ಜರಮಟ್ಟಿ, ಪರ್ಪ ಹುದ್ದಾರ, ಚೆನ್ನಪ್ಪ ಪಟ್ಟಣಶೆಟ್ಟಿ, ಬಸಪ್ಪ ಕೊಪ್ಪದ, ಬಸಪ್ಪ ಬ್ಯಾಳಿ, ಬಸವರಾಜ ನಾಗನೂರ, ಶಿವಲಿಂಗ ಕೌಜಲಗಿ, ಬಸವರಾಜ ದಲಾಲ, ಮಹಾಲಿಂಗಪ್ಪ ಕಂಠಿ, ಮಹಾದೇವ ಮೇಟಿ, ಹನಮಂತ ಯರಗಟ್ಟಿ, ಗೀರೀಶ ಖೋತ, ಸಂಗಪ್ಪಾ ಹುಬ್ಬಳ್ಳಿ, ಯಲ್ಲಪ್ಪ ಬಾಗೋಜಿ, ರಾಜು ನಂದೆಪ್ಪನ್ನವರ, ಮಹಾದೇವ ಬೆಣಚಿನಮರಡಿ , ಎಂ ಎಂ ಪಾಟೀಲ,ಮಹಾಂತೇಶ್ ತಿರಕಣ್ಣವರ, ಹನಮಂತ ಕುರಿ, ಲಕ್ಷ್ಮಣ ಅಮ್ಮಣಗಿ, ಚನ್ನಪ್ಪ ಕನ್ನಾಳ, ಮಹೇಶ ಮುಕುಂದ, ಮಲ್ಲಪ್ಪಾ ಕಕ್ಕನ್ನವರ, ಮಲ್ಲಪ್ಪ ದಲಾಲ ಗೀರೀಶ ಶಿರೋಳ, ರವಿ ಗಿರಿಸಾಗರ, ಸಂಗಮೇಶ ಪಟ್ಟಣಶೆಟ್ಟಿ, ಸಂದೀಪ ಸೂರಗೊಂಡ ಸೇರಿದಂತೆ ಅನೇಕ ಪಂಚಮಸಾಲಿ ಸಮಾಜದ ಮುಖಂಡರು ಯುವಕರು ಭಾಗಿಯಾಗಿದ್ದರು.