ಬಿಜಗುಪ್ಪಿ-ಕುಳ್ಳೂರ ಗ್ರಾಮದ ಮಧ್ಯ ಉಂಟಾದ ಭೂಕುಸಿತ ವೀಕ್ಷಣೆ
ಲೋಕದರ್ಶನ ವರದಿ
ರಾಮದುರ್ಗ 02: ತಾಲೂಕಿನ ಬಿಜಗುಪ್ಪಿ-ಕುಳ್ಳೂರ ಮಾರ್ಗಮಧ್ಯದಲ್ಲಿ ಉಂಟಾದ ಭೂ ಕುಸಿತವನ್ನು ಬೆಳವಾವಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನ್ ಪಾಟೀಲ ಸೋಮವಾರ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತರು ಇತ್ತಿಚೆಗಷ್ಟೇ ಸುಮಾರು 2-3 ಬಾರಿ ಮಳೆಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಂಧ್ರಾಕಾರದಲ್ಲಿ ಭೂಕುಸಿತ ಉಂಟಾಗಿದ್ದು ಮಳೆ ಕಾರಣ ನೀಡುವುದು ಸರಿಯಲ್ಲ. ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ ವೈಜ್ಞಾನಿಕ ಕಾರಣ ಕಂಡು ಹಿಡಿದು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ರೈತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.
ರೈತರೊಂದಿಗೆ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನ್ ಪಾಟೀಲ, ಹಲವು ವರ್ಷಗಳ ಹಿಂದೆ ನೀರಿನ ಹರಿಯುವ ಮಾರ್ಗ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿಹೋದ ಕಾರಣದಿಂದ ನೀರಿನ ರಭಸಕ್ಕೆ ನೀರಿನ ಮಾರ್ಗ ಮತ್ತೆ ತೆರೆಯಲಾರಂಭಿಸಿದ್ದು, ರಂಧ್ರಾಕಾರದ ಭೂಕುಸಿತ ಉಂಟಾಗಿದೆ. ನೀರಿನ ಹರಿವಿಗೆ ಮಾರ್ಗ ಬಿಟ್ಟು, ಅಲ್ಲಿಯೇ ಸಂಚಾರಕ್ಕೆ ರಸ್ತೆ ಮಾಡುವುದಾದರೆ ಭೂಮಿ ರಂಧ್ರವಾಗುತ್ತಿರುವ ಪ್ರದೇಶದಲ್ಲಿ ಬ್ರೀಡ್ಜ್ ನಿಮರ್ಾಣ ಮಾಡಿ, ಅಕ್ಕಪಕ್ಕದಲ್ಲಿ ನೀರು ಹರಿಯಲು ಕಾಲುವೆ ನಿಮರ್ಾಣ ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು.
ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ ರಾಮದುರ್ಗ