ಎತ್ತಿನಗುಡ್ಡದಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ

ಧಾರವಾಡ : ಧಾರವಾಡ ನಗರದ ವಾರ್ಡ ನಂಬರ್ 03ರ ಎತ್ತಿನಗುಡ್ಡದಲ್ಲಿ ಹಲವಾರು ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವ ಮೂಲಕ ಧಾರವಾಡ ಗ್ರಾಮೀಣ ಶಾಸಕರಾದ ಅಮೃತ್ ದೇಸಾಯಿ ಅವರು ಶುಕ್ರವಾರ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ವತಿಯಿಂದ 2019 -20 ನೇ ಸಾಲಿನ ಟಿ.ಎಸ.ಪಿ ಅನುದಾನದಲ್ಲಿ ಎತ್ತಿನಗುಡ್ಡ ನೀರಿನ ಟ್ಯಾಂಕ ಹಾಗು ಬಸವರಾಜ ಅವರಾದಯವರ ಮನೆ ಹತ್ತಿರ ಕಾಂಕ್ರೀಟ ರಸ್ತೆ ನಿಮರ್ಾಣ ಕಾಮಗಾರಿ, ಭೀಮಣ್ಣ ಅವರಾದಿ ಯವರ ಮನೆಯಿಂದ ಸುಭಾಸ ಕೇಕಾಟಿಯವರ ಮನೆ ಮುಂದೆ ಹಾಗೂ ಹೊಸ ಓಣಿಯಲ್ಲಿ ಹುಲ್ಲ ಓಣಿ ಸುಭಾಸ ಕೇಕಾಟಿಯವರ ಮನೆ ಹತ್ತಿರ ಗಟಾರ್ ನಿರ್ಮಾ ಣ ಕಾಮಗಾರಿ, 

ಸಣ್ಣಗೌಡರ ಓಣಿಯಿಂದ ರುದ್ರಪ್ಪ ಜಮನಾಳ ಅವರ ಮನೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾ ಣ ಕಾಮಗಾರಿ ಗಳಿಗೆ ಭೂಮಿ ಪೂಜೆ ಮಾಡಲಾಯಿತು.

ಬಳಿಕ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಅಮೃತ ದೇಸಾಯಿ ಅವರು ಧಾರವಾಡ ಗ್ರಾಮೀಣ  ಸಮಗ್ರ ಅಭಿವೃದ್ದಿಗೆ ಹತ್ತು ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲೂ ಕೂಡ ಎತ್ತಿನಗುಡ್ಡದಲ್ಲಿ ಆದ್ಯತೆ ಮೇರೆಗೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ, ಎತ್ತಿನಗುಡ್ಡ ಸ್ಥಳೀಯ ಜನರ ಆಶೋತ್ತರಗಳಿಗೆ ಸದಾ ಕಾಲ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಮಂಡಳ ಅಧ್ಯಕ್ಷ ಸುನಿಲ್ ಮೊರೆ, ಪಾಲಿಕೆ ಮಾಜಿ ಸದಸ್ಯ ವೀರನಗೌಡ ಪಾಟೀಲ, ಶಂಕರ ಹಾರಿಕೊಪ್ಪ,  ವಿಠ್ಠಲ್ ಗುಡದೂರ, ಅಡಿವೆಪ್ಪ ಹೊನ್ನಪ್ಪನವರ್, ಬಸವರಾಜ ರುದ್ರಾಪುರ, ಮಂಜುನಾಥ್ ನಡಟ್ಟಿ,  ಸಂತೋಷ್ ದೇವರೆಡ್ಡಿ, ಜಯತೀರ್ಥ ಮಾಳಗಿ, ಹೇಮಂತ ನಿಲಣ್ಣವರ್ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.