ಬೆಳಗಾವಿ 19: ಶಾಸಕ ಅನಿಲ ಬೆನಕೆ ರವರು ಮಹಾನಗರ ಪಾಲಿಕೆ ಆಯುಕ್ತರನ್ನು ಅವರ ಬೇಟಿಯಾಗಿ 14ನೇ ಹಣಕಾಸು ಯೋಜನೆಯಡಿ ಹಾಗೂ ಉಳಿತಾಯದ ಹಣದಲ್ಲಿ ಕಾಮಗಾರಿಗಳನ್ನು ತೆಗೆದುಕೊಂಡಿದ್ದು ಆ ವಿಷಯದ ಕುರಿತು ಮಹಾನಗರ ಪಾಲಿಕೆಯ ಇಂಜಿನೀಯರಗಳೊಂದಿಗೆ ಚಚರ್ಿಸಿದರು ಹಾಗೂ ನಂತರದಲ್ಲಿ ನಗರದ ಅನೇಕ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು ಮಹಾನಗರ ಪಾಲಿಕೆ ಅನುದಾನದಡಿಯಲ್ಲಿ ಟಿಳಕ್ ಚೌಕನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಜಿ+1 ಕಟ್ಟಡ ನಿಮರ್ಾಣ ಕಾಮಗಾರಿಯನ್ನು ರೂ. 07.00 ಲಕ್ಷಗಳಲ್ಲಿ ಹಾಗೂ ಮಹಾದ್ವಾರ ರೋಡ್ನಲ್ಲಿ ಡ್ರೈನೇಜ್ ಲೈನ್ ನಿಮರ್ಾಣ ಮಾಡಲು ರೂ. 05.50 ಲಕ್ಷ ಗಳಲ್ಲಿ ಮತ್ತು ಕಣಬಗರ್ಿಯಲ್ಲಿ ಬಸವರಾಜ ಯಳ್ಳೂರಕರ ಇವರ ಮನೆ ಮುಂದಿನ ಬಂಡಿ ಮಾರ್ಗದ ರಸ್ತೆ ನಿಮರ್ಾಣ ಕಾಮಗಾರಿಯನ್ನು ರೂ. 11.00 ಲಕ್ಷಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಆದ್ದರಿಂದ ಈ ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಇಂಜಿನೀಯರ ಹಾಗೂ ಗುತ್ತಿಗೆದಾರರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸಹಾಯಕ ಇಂಜಿನೀಯರ ಅಂಕಿತ, ಗುತ್ತಿಗೆದಾರರು ಹಾಗೂ ಆ ಭಾಗದ ರಹವಾಸಿಗಳು ಉಪಸ್ಥಿತರಿದ್ದರು.