ಲೋಕದರ್ಶನ ವರದಿ
ಶೇಡಬಾಳ: ಕಾಗವಾಡ ವಿಧಾನ ಸಭಾ ಮತಕ್ಷೇತ್ರವನ್ನು ಕನರ್ಾಟಕ ರಾಜ್ಯದಲ್ಲಿಯೇ ಒಂದು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿರುವುದಾಗಿ ಕಾಗವಾಡ ಅನರ್ಹ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಹೇಳಿದರು.
ಅವರು ಬುಧವಾರ ದಿ. 30 ರಂದು ಶೇಡಬಾಳ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಕನರ್ಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಗವಾಡ ವಿಧಾನಸಭಾ ಮತಕ್ಷೇತ್ರದ ವಿಶೇಷ ಅಭಿವೃದ್ಧಿಗಾಗಿ ಇಗಾಗಲೇ 45 ಕೋಟಿ ರೂ. ಗಳನ್ನು ಮಂಜೂರು ಮಾಡಿದ್ದಾರೆ. ಮತ್ತೇ 45 ಕೋಟಿ ರೂ.ಗಳನ್ನು ಮಂಜೂರಾತಿ ಪಡೆದುಕೊಂಡು ಕ್ಷೇತ್ರವನ್ನು ಸವಾಂಗೀಣ ಅಭಿವೃದ್ಧಿಗೊಳಿಸಿ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ.
ಅದರನ್ವಯ ಕ್ಷೇತ್ರದಲ್ಲಿನ ಪ್ರತಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶೇಡಬಾಳ ಪಟ್ಟಣದಲ್ಲಿ ಸುಮಾರು 5 ಕೋಟಿ 80 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ವಾರ್ಡ ನಂ. 14 ರಲ್ಲಿ ಸ್ಟೇಶನ್ ರಸ್ತೆಯಿಂದ ಘೇನಪ್ಪಗೋಳ ಜೈನ ಬಸದಿವರೆಗೆ 40 ಲಕ್ಷ ರೂ., ವಾರ್ಡ ನಂ. 12 ರಲ್ಲಿ ಶಂಕರ ಖರಾಡೆ ಮನೆಯಿಂದ ಕಾಗವಾಡ-ಶೇಡಬಾಳ ಮುಖ್ಯ ರಸ್ತೆಯವರೆಗೆ 20 ಲಕ್ಷ ರೂ., ದೊಂಡಿಬಾ ಬೇರಡ ಮನೆಯಿಂದ ಕಲ್ಲಪ್ಪ ಖಟಾವಿ ಮನೆಯವರೆಗೆ 15 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಉಗಾರ ಬುದ್ರುಕ ಗ್ರಾಮದಲ್ಲಿಯು ವಿವಿಧ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ ನೀಡಿದರು.
ಶೇಡಬಾಳ ಗ್ರಾಮದ ಮುಖಂಡರಾದ ಭರತೇಶ ಪಾಟೀಲ ಮಾತನಾಡಿ ಇಲ್ಲಿಯವರೆಗೆ ಯಾವುದೇ ಶಾಸಕರು ಮಾಡದೇ ಇರುವಂತಹ ಅಭಿವೃದ್ಧಿ ಕೆಲಸವನ್ನು ಶ್ರೀಮಂತ ಬಾಳಾಸಾಬ ಪಾಟೀಲ ಮಾಡಿದ್ದಾರೆ.
ಗ್ರಾಮದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆಂದು ಬಣ್ಣಿಸಿದರು.
ಈ ಸಮಯದಲ್ಲಿ ಹಿರಿಯ ಮುಖಂಡರಾದ ಸುಭಾಷ ಕಠಾರೆ, ಯುವ ಮುಖಂಡ ರಮೇಶ ಚೌಗಲಾ, ಪ್ರಕಾಶ ಮಿಜರ್ೆ, ತಾಪಂ ಸದಸ್ಯರಾದ ಸುಧಾಕರ ಭಗತ, ಮಹಾವೀರ ಲಗಾರೆ, ಬಾಬಾಸಾಬ ಗಣೆ, ಸಂಜು ಘೇನಪ್ಪಗೋಳ, ಶಾಂತಿನಾಥ ಮಾಲಗಾಂವೆ, ಶಾಂತಿನಾಥ ಉಪಾಧ್ಯೆ, ಸುಭಾಷ ಢಾಲೆ, ರವಿ ಕಾಂಬಳೆ ಶೇಡಬಾಳ ಪಟ್ಟಣ ಪಂಚಾಯತ ಸದಸ್ಯರು, ಗುತ್ತಿಗೆದಾರ ಆಸೀಫ ಘಟನಟ್ಟಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.