ಶಾಲಾ ಆವರಣಗೋಡೆ ನಿಮರ್ಾಣಕ್ಕೆ ಭೂಮಿ ಪೂಜೆ

ಲೋಕದರ್ಶನ ವರದಿ

ಬೆಳಗಾವಿ: ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಾಲಾ ಆವರಣಗೋಡೆ ನಿಮರ್ಾಣಕ್ಕೆ ಭೂಮಿ ಪೂಜೆಯನ್ನು ಇಂದು ನೆರವೇರಿಸಲಾಯಿತು. ಬಂಬರಗಾಗ್ರಾಮ ಪಂಚಾಯತಿ ವತಿಯಿಂದ ನರೇಗಾ ಯೋಜನೆಯಲ್ಲಿ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. 

ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಸದಸ್ಯ ಭೀಮರಾವ ನಾಯಿಕ, ಬಂಬರ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀರಾಮಾ ನಾಯಿಕ, ಸದಸ್ಯರಾದ ಬಾಳೇಶ ತಳವಾರ, ಬಾಬು ಬಾಂದುಗರ್ೆಹಳೆಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷರಾದ ಬಸನಗೌಡ ಹುದ್ದಾರ, ಶಾಲಾ ಸುಧಾರಣಾ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಕಲ್ಲಪ್ಪ ಪಾಮನಾಯಿಕ, ಉಪಾಧ್ಯಕ್ಷರಾದ ಮಾರುತಿ ಮಗದುಮ್ಮ ಗ್ರಾಮದ ಹಿರಿಯರಾದ ಸಂಜುಕಲ್ಲೂರಿ, ರಮೇಶ ಹಗೆದಾಳ, ಶಿವಯ್ಯ ಹಿರೇಮಠ, ಕಲ್ಲಯ್ಯ ಹಿರೇಮಠ, ಮಾರುತಿ ಬ. ಲಾಡೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಪತ್ತಾರ ಯೋಜನೆ ಕುರಿತು ವಿವರಿಸಿದರು. ಶಾಲಾ ಪ್ರಧಾನ ಗುರುಗಳಾದ ಬಸವರಾಜ ಸುಣಗಾರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.