ಗದಗ : ಮುಳಗುಂದದ ಬಸ್ ನಿಲ್ದಾಣದಿಂದ ಲಕ್ಷ್ಮೇಶ್ವರ ರಸ್ತೆಗೆ ಕೂಡುವ ಯಳವತ್ತಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗಣಿ, ಭೂ ವಿಜ್ಞಾನ , ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ 2.5 ಕೋಟಿ ರೂ. ವೆಚ್ಚದ 1050 ಮೀ. ಉದ್ದದ ಈ ಕಾಮಗಾರಿ ಭೂಮಿ ಪೂಜೆ ಸಂದರ್ಭದಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಕೆ.ಪಾಟೀಲ, ಗದಗ ಜಿ.ಪಂ. ಅಧ್ಯಕ್ಷ ಕುಮಾರ ಸಿದ್ಧಲಿಂಗೇಶ್ವರ ಪಾಟೀಲ, ಜಿ.ಪಂ. ಸಾಮಾಜಿಕ ಸ್ತಾಯಿ ಸಮಿತ ಅಧ್ಯಕ್ಷ ಹನುಮಂತಪ್ಪ ಪೂಜಾರ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಲೋಕೋಪಯೋಗಿ ಇಲಾಖೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವರಾಜ, ಜನಪ್ರತಿನಿಧಿಗಳು ಮುಳಗುಂದದ ಗುರು ಹಿರಿಯರು ಸಮಾರಂಭದಲ್ಲಿದ್ದರು.