ಲೋಕದರ್ಶನ ವರದಿ
ರಾಮದುರ್ಗ 09: ಜನತೆಯ ದೈನಂದಿನ ಅವಶ್ಯಕತೆಗಳಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾವು ಸದಾ ಸಿದ್ಧವೆಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದರು.
ಪಟ್ಟಣದ ನೇಕಾರ ಪೇಠ, ಮಡ್ಡಿಗಲ್ಲಿ ಸೇರಿದಂತೆ ವಿವಿಧ ವಾರ್ಡಗಳಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಸ್ಮಶಾನದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಅಭಿವೃದ್ಧಿಗೆ ನಾಗರಿಕರು ಪಕ್ಷಾತೀತವಾಗಿ ಪರಸ್ಪರ ಸಹಕಾರದಿಂದ ವತರ್ಿಸಿ, ತಮ್ಮ ವಾರ್ಡಗಳ ಪ್ರಗತಿಯತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದ ಅವರು, ಗುತ್ತಿಗೆದಾರರು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಧೀರ್ಘಕಾಲ ಬಾಳಿಕೆ ಬರುವ ಕಾಮಗಾರಿ ಕೈಗೊಳ್ಳಬೇಕು. ಪುರಸಭೆ ಅಧಿಕಾರಿಗಳು ಕಳಪೆಯಾದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಸೋಮನಾಥ ಧೂತ್, ಪುರಸಭೆ ಸದಸ್ಯರಾದ ಮಾಂಗಿಲಾಲ ಧೂತ್, ಶಾನೂರ ಯಾದವಾಡ, ರಾಜು ಬೆಂಬಳಗಿ, ಸಂಗೀತಾ ರಾಯಭಾಗ, ನಾಗರಾಜ ಕಟ್ಟಿಮನಿ, ಮುಖಂಡರಾದ ಗಣೇಶ ಮ್ಯಾದಾರ, ನಾರಾಯಣ ಬಂಡಿವಡ್ಡರ, ಡಿ. ಬಿ. ಬಂಡಿವಡ್ಡರ, ಪುರಸಭೆ ಅಭಿಯಂತರರಾದ ಸುಭಾಸ್ ಚೌಗಲಾ, ಎಂ. ಪಿ. ನದಾಫ್ ಸೇರಿದಂತೆ ಇತರರಿದ್ದರು.