ಲೋಕದರ್ಶನ ವರದಿ
ಶಿರಹಟ್ಟಿ 09: ಇಂದಿನ ಕಾಲದಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆಯುವಂತಹ ಸವಾಲು ಸಕರ್ಾರದ ಮುಂದಿದ್ದು, ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಯ ಮಕ್ಕಳ ಸವರ್ಾಂಗೀಣ ಅಭಿವೃದ್ಧಿಗಾಗಿ ಮಕ್ಕಳ ಗುಣ ಮಟ್ಟದ ಶಿಕ್ಷಣಕ್ಕೆ ನಾವೆಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು ಅದಕ್ಕೆ ಬೇಕಾಗುವ ಉತ್ತಮ ಸೌಲಭ್ಯಗಳನ್ನು ಒದಗಿಸುವಲ್ಲಿ ನಾವೆಲ್ಲರೂ ಸೇರಿ ಪ್ರಯತ್ನಿಸಿ ಸಕರ್ಾರದಿಂದ ವಿಶೇಷ ಅನುದಾನ ತಂದು ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಗುಣಮಟ್ಟದ ಕೊಠಡಿಗಳಲ್ಲಿ ಮಕ್ಕಳು ಓದುವಂತಾಗಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಪಟ್ಟಣದ ಸಿಸಿಎನ್ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ 15.75 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು. ಸಮಾಜದಲ್ಲಿ ಶಿಕ್ಷಕರ ಮೆಲೆ ದೊಡ್ಡ ಜವಾಬ್ದಾರಿ ಇದೆ. ದೇಶದ ಏಳಿಗೆಗಾಗಿ ಶಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಾನು ಲಮಾಣಿ, ಮಾಜಿ ಪ್ರಾಂಶುಪಾಲ ಎಚ್ಎಂ ದೇವಗಿರಿ ರಾಮಣ್ಣ ಡಂಬಳ, ಚಂದ್ರಕಾಂತ ನೂರಶೆಟ್ಟರ, ಸಿಸಿಎನ್ ಸಕರ್ಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ವಿ. ಎಸ್. ಶಟವಾಜಿ, ಪಟ್ಟಣ ಪಂಚಾಯ್ತಿ ಸದಸ್ಯ ಸಂದೀಪ ಕಪ್ಪತ್ತನವರ ಮತ್ತು ಎನ್. ಎಫ್. ಸಜ್ಜನ ಇದ್ದರು.