ಲೋಕದರ್ಶನ ವರದಿ
ಸಿಂದಗಿ,1: ಜನಸಾಮಾನ್ಯರ ಬೇಡಿಕೆಗೆ ತೆಲೆಬಾಗಿ ಕೆಲಸ ಮಾಡುತ್ತೇನೆ ಎಂದು ತೋಟಕಾರಿಕೆ ಸಚಿವ, ಜಿಲ್ಲಾ ಸಚಿವ ಎಂ.ಸಿ.ಮನಗೂಳಿ ಹೇಳಿದರು.
ಶುಕ್ರವಾರ ತಾಲೂಕಿನ ಓತಿಹಾಳ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂತರ್ಿ ಅನಾವರಣ ಸಮಾರಂಭ ಹಾಗೂ ಓತಿಹಾಳದಿಂದ ಹರನಾಳ ರಸ್ತೆ ಸುಧಾರಣೆಗೆ ಭೂಮಿ ಪೂಜೆ ಹಾಗೂ ಶಾಸಕರ ಅನುದಾನದಲ್ಲಿ 4.50 ಲಕ್ಷ ರೂ. ಸಿದ್ಧಲಿಂಗ ಮಹಾರಾಜರ ಮಠಕ್ಕೆ ಅನುದಾನ ಬಿಡುಗಡೆ ಸಮಾರಂಭದಲ್ಲಿ ಅವರು ಭೂಮಿ ಪೂಜೆ ನೇರವೆರಸಿದಿರು.
ನನ್ನ ಅಧಿಕಾರದ ಅವಧಿಯಲ್ಲಿ ಹೆಸರು ಉಳಿಯುವಂತ ಕೆಸಲ ಮಾಡಿದ್ದೇನೆ ಮತ್ತು ಮುಂದೆ ಮಾಡುತ್ತೇನೆ. ಕಳೆದ 1994ರಲ್ಲಿ ಕ್ಷೇತ್ರದ ಅಧಿಕಾರ ನೀಡಿದ್ದಿರಿ. ಹೆಸರುಳಿಯುವಂತೆ ಕೆಸಲ ಮಡಿದ್ದೇನೆ. ಮತ್ತೆ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದಿರಿ. ನಿಮ್ಮ ಆಶೀವರ್ಾದದಿಂದ ಕುಮಾರಸ್ವಾಮಿ ಅವರು ತೋಟಗಾರಿಕೆ ಸಚಿವರನ್ನಾಗಿ ಮಾಡುವ ಜೊತೆಗೆ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ. ಈ ಅವಧಿಯಲ್ಲಿಯೂ ಹೆಸರು ಅಜರಾಮರವಾಗಿ ಉಳಿಯುವಂತ ಕೆಸಲಗಳನ್ನು ಮಾಡುತ್ತೇನೆ ಎಂದರು.
ನಾನು ನಿಮ್ಮ ಮನೆಯ ಮಗನಾಗಿ ನಿಮ್ಮಲ್ಲೊಬ್ಬನಾಗಿ ಬೆಳೆದಿದ್ದೇನೆ. ನನ್ನನು ಕೆಲವರು ಮಾವ ಎಂದರೆ ಇನ್ನು ಕೆಲವರು ಕಾಕಾ ಎಂದು ಕರೆಯುತ್ತಾರೆ. ಇಷ್ಟೇಲ್ಲ ಸಂಬಂಧವಿರುವಾಗ ನನ್ನಿಂದ ನಿಮಗೆ ಕೆಲಸವಾಗಬೇಕಾಗಿದ್ದರೆ ನೇರವಾಗಿ ಬನ್ನಿ. ಮಧ್ಯಮತರ್ಿಗಳನ್ನು ಕರೆದುಕೊಂಡು ಬರಬೇಡಿ. ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ. ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಆಧ್ಯತೆ ನೀಡುತ್ತೇನೆ ಎಂದರು.
ಓತಿಹಾಳ ಗ್ರಾಮದ ಗ್ರಾಮಸ್ಥರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.