ಗದಗ (ಸಂಭಾಪುರ) 28: ಗದಗ ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಭಾಪೂರ ಗ್ರಾಮದಲ್ಲಿ 14 ಲಕ್ಷ ರೂ. ವೆಚ್ದ ಹೆಚ್ಚುವರಿ ಜಲಸಂಗ್ರಹಗಾರದ ನಿಮರ್ಾಣದ ಕಾಮಗಾರಿಗೆ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಲಾಗುವ ಮೇಲ್ಮಟ್ಟದ ಜಲಸಂಗ್ರಹಗಾರವನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಯೊಂದಿಗೆ ನಿರ್ಮಿಸಲು ಸಚಿವ ಸಿ.ಸಿ.ಪಾಟೀಲ್ ಇಲಾಖೆಯ ಸಹಾಯಕ ಅಭಿಯಂತ ಎ.ಎಸ್.ಕಣವಿ ಅವರಿಗೆ ನಿದರ್ೇಶನ ನೀಡಿದರು.
ಹಾತಲಗೇರಿ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಕುಸುಮಾ ಬಂಡಿ, ಗ್ರಾಪಂ ಸದಸ್ಯರುಗಳಾದ ಜಿ.ಆರ್.ನಾಗನೂರ, ಡಿ.ಜಿ.ಕುರುಬರ, ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕಣರ್ಿ, ಗ್ರಾಪಂ ಯೋಜನಾಭಿವೃದ್ಧಿ ಅಧಿಕಾರಿ ಎನ್.ಬಿ.ದೇಸಾಯಿ, ಗ್ರಾಮದ ಗಣ್ಯರು, ಗುರು ಹಿರಿಯರು ಹಾಗೂ ಗ್ರಾಮಸ್ಥರು ಇದ್ದರು.