ಲೋಕದರ್ಶನ ವರದಿ
ಕೊಪ್ಪಳ 16: ಕೊಪ್ಪಳ ನಗರದಲ್ಲಿ ರೂ.1 ಕೋಟಿ 83. ಲಕ್ಷದ ಪಶು ವೈದ್ಯ ಪಾಲಿ ಕ್ಲೀನಿಕ್ ಆಸ್ಪತ್ರೆ ಕಟ್ಟಡ ಹಾಗೂ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರೂ.2 ಕೋಟಿ 50 ಲಕ್ಷದ ಸಿ.ಸಿ ರಸ್ತೆ, ಶಾಲಾ ಕಟ್ಟಡ, ಚರಂಡಿ, ಅಂಬೇಡ್ಕರ ಭವನ, ಕೆರೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಈ 7 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿಶೇಷವಾಗಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಶಾಶ್ವತ ನೀರಾವರಿ ಯೋಜನೆ ಜಾರಿ ಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ.
ಸಿಂಟಾಲೂರ ಏತ ನೀರಾವರಿ ಯೋಜನೆಯಿಂದ ತುಂತುರು ನೀರಾವರಿ ಅನುಷ್ಠಾನಗೊಳಿಸಿದ್ದು ಶೀಘ್ರವೇ ಸಿಂಟಾಲೂರ ಏತ ನೀರಾವರಿಯ ಕಾಲುವೆ ಮೂಖಾಂತರ ರೂ. 22ಕೋಟಿ ವೆಚ್ಚದಲ್ಲಿ ಅಳವಂಡಿ ಭಾಗದ 9 ಕೆರೆಗಳನ್ನು ತುಂಬಿಸಲಾಗುವುದು. ಕೃಷಿ ಹೊಂಡಗಳ ನಿಮರ್ಾಣದಿಂದ ಒಣ ಬೇಸಾಯಕ್ಕೆ ಹೆಚ್ಚು ಅನೂಕೂಲವಾಗಿದ್ದು, ಸಕರ್ಾರವೂ ಕೃಷಿಗೆ ಹೆಚ್ಚಿನ ಆಧ್ಯೆತೆ ನೀಡಿ ರೈತರಿಗೆ ಅನುಕೂಲವಾಗುವ ಕೃಷಿ ಸಲಕರಣೆಗಳು, ಬೀಜ ಗೊಬ್ಬರಗಳ ಮೇಲೆ ಅಧಿಕ ಸಬಸ್ಸಿಡಿ ಕೊಡಬೇಕು. ಗ್ರಾಮಗಳ ಸ್ವಚ್ಛತೆಗೆ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ನಿಮರ್ಾಣ ಮಾಡಿಕೊಂಡು ಮಾರಕ ರೋಗಗಳಿಂದ ಗ್ರಾಮಗಳನ್ನು ಮುಕ್ತಗೊಳಿಸಬೇಕು ಪ್ರತಿಯೊಬ್ಬ ಗ್ರಾಮಸ್ಥರ ಅದಮ್ಯ ಕತ್ರ್ಯವ್ಯವಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಬಿ. ನಾಗರಳ್ಳಿ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ, ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಮಾಜಿ ಕೆಎಂಎಫ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರು, ನಗರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಕಾಟನ ಪಾಷಾ ನಗರಸಭೆಯ ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ, ಅಜೀಮ್ ಅತ್ತಾರ, ಗುರುರಾಜ ಹಲಗೇರಿ, ಅಕ್ಬರಪಾಷಾ ಪಲ್ಟನ್, ಮುಖಂಡರುಗಳಾದ ಭರಮಪ್ಪ ನಗರ, ವೆಂಕಟೇಶ ಕಂಪಸಾಗರ, ಪ್ರಸನ್ನ ಗಡಾದ, ಗಾಳೆಪ್ಪ ಪೂಜಾರ, ಕೃಷ್ಣ ಗಲಬಿ, ನವೋದಯ ವಿರುಪಣ್ಣ, ವೆಂಕಣ್ಣ ಹೊರಕನಾಳ, ಮೈನುಸಾಬ ಮುಲ್ಲಾ, ತೋಟಪ್ಪ ಸಿಂಟ್ರ, ಅನ್ವರ ಗಡಾದ, ನಜೀರ ಅಳವಂಡಿ, ಗುರುಬಸವರಾಜ ಹಳ್ಳಿಕೇರಿ, ಕೆಆರ್ಡಿಎಲ್ ಅಭಿಯಂತರರು, ನಿಮರ್ಿತಿ ಅಭಿಯಂತರರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.