ಓವರ್ ಟ್ಯಾಂಕ್ ನಿಮರ್ಾಣಕ್ಕೆ ಭೂಮಿ ಪೂಜೆ

ಲೋಕದರ್ಶನ ವರದಿ

ಬೆಟಗೇರಿ 14: ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಈಗಾಗಲೇ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಜಾಗೆಯಲ್ಲ್ಲಿ ಶುಕ್ರವಾರ ಫೆ.14 ರಂದು ನಡೆದ ಕುಡಿಯುವ ನೀರಿನ ಓವರ್ ಟ್ಯಾಂಕ್ ನಿಮರ್ಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಸ್ಥರ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಗೋಕಾಕ ಉಪ ವಿಭಾಗದ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಐ.ಎಮ್.ದಪ್ಪೆದಾರ ಮಾತನಾಡಿ, ಎನ್ಆರ್ಡಿಡಬ್ಲೂಪಿ(ಎಸ್ಡಿಪಿ) ಯೋಜನೆಯ ಅನುದಾನದಡಿಯಲ್ಲಿ ಸುಮಾರು 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸುಮಾರು 1ಲಕ್ಷ ಲೀಟರ್ ನೀರು ಸಂಗ್ರಹ ಸಾಮಥ್ರ್ಯದ ಕುಡಿಯುವ ನೀರಿನ ಓವರ್ ಟ್ಯಾಂಕ್ ನಿಮರ್ಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. 

2020ನೇ ಇಸ್ವಿ ಮಾರ್ಚ ತಿಂಗಳದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

     ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಬಸಪ್ಪ ವಡೇರ, ಎಚ್.ಬಿ.ಪಾಟೀಲ, ಪಿ.ಕೆ.ಕೋಣಿ, ಗ್ರಾಪಂ ಕಾರ್ಯದಶರ್ಿ ಗೌಡಪ್ಪ ಮಾಳೇದ, ಪರಶುರಾಮ ಇಟಗೌಡ್ರ, ಕರ ವಸೂಲಿಗಾರ ಸುರೇಶ ಬಾಣಸಿ, ವಿಠಲ ಚಂದರಗಿ, ಗುತ್ತಿಗೆದಾರ ಬಿ.ಪಿ.ಕೋಣಿ, ಪುಂಡಲೀಕ ಹಾಲಣ್ಣವರ, ಅಜರ್ುನ ಬ್ಯಾಗಿ, ಸಣ್ಣಪ್ಪ ಐದುಡ್ಡಿ ಸೇರಿದಂತೆ ಸ್ಥಳೀಯರು, ಇತರರು ಇದ್ದರು.