ತಮ್ಮ ಸಂಪ್ರದಾಯದಂತೆ ದೀಪಾವಳಿ ಆಚರಿಸಿದ ಲಂಬಾಣಿಯರು
Lambanis celebrated Diwali according to their tradition
ತಮ್ಮ ಸಂಪ್ರದಾಯದಂತೆ ದೀಪಾವಳಿ ಆಚರಿಸಿದ ಲಂಬಾಣಿಯರು
ನರೇಗಲ್ 23 : ಪಟ್ಟಣದ ಬಂಜಾರ(ಲಂಬಾಣಿ) ಜನರು ವಾಸಿಸುವ ಮನೆಗಳಲ್ಲಿ ದೀಪಾವಳಿಯಂದು ಅವಿವಾಹಿತ ಯುವತಿಯರು ಮೇರಾ (ದೀಪ ಬೆಳಗುವುದು) ಮಾಡಿದರು. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಲಕ್ಷ್ಮೀ ಪೂಜೆಯ ಮೊದಲು ಗೋಪೂಜೆ ಮಾಡಿದರು. ನಂತರ ರಾತ್ರಿ ಢಾಕಣಿ (ಹರಳೆಣ್ಣೆ ದೀಪದ ಆರತಿ)ಗಳನ್ನು ಹಚ್ಚಿಕೊಂಡು ಮನೆ ಜಗಲಿಗೆ ನಂತರ ತಂದೆಗೆ ಬಾಪೂ ತೋನ ಮೇರಾ.., ತಾಯಿಗೆ ಯಾಡಿ ತೋನ ಮೇರಾ. ಅಣ್ಣನಿಗೆ ಭೀಯಾ ತೋನ ಮೇರಾ. ಎಂದು ಮನೆಯವರಿಗೆ ಮೇರಾ ಮಾಡಿದರು. ತಾಂಡಾದ ನಾಯಕನ ಮನೆಗೆ ಹೋಗಿ ಹಾಡುವ ಮೂಲಕ ಮೇರಾ ಮಾಡಿದರು. ಅದಾದ ಮೇಲೆ ತಾಂಡಾದ ಇತರೆ ಮನೆಗಳಿಗೆ ಹೋಗಿ ಮಾವನಿಗೆ ಮಾಮಾ ತೋನ ಮೇರಾ. ಅತ್ತೆಗೆ ಫೂಫಿ ತೋನ ಮೇರಾ ಹೀಗೆ ಮನೆಯ ಪ್ರತಿಯೊಬ್ಬರಿಗೂ ಹಾಗೂ ಹಿತೈಷಿ ಬುಂಧುಗಳ ಮನೆಯ ಸದಸ್ಯರಿಗೂ ಮೇರಾ ಮಾಡಿದರು. ಈ ವೇಳೆ ಪ್ರೀತಿಯಿಂದ ನೀಡಿದ ಉಡುಗರೆಯನ್ನು ಸ್ವೀಕರಿಸಿದರು. ಯುವತಿಯರು ಮೇರಾ ಮಾಡುವುದರಿಂದ ಆ ಮನೆಯ ಅಂಧಕಾರ, ದುಷ್ಟಶಕ್ತಿ ದೂರಹೋಗಿ ಸಮೃದ್ದಿಯ ಬೆಳಕು ಬರುತ್ತದೆ. ವ್ಯಕ್ತಿಯ ಆಯುಸ್ಸ, ಆರೋಗ್ಯ, ಹೆಚ್ಚಿಸುತ್ತದೆ ಅದಕ್ಕಾಗಿ ಯುವತಿಯರು ಮನೆಯನ್ನು ಪ್ರಜ್ವಲಿಸುತ್ತಾರೆ ಎನ್ನುವ ನಂಬಿಕೆ ಬುಡಕಟ್ಟು ಬಂಜಾರ ಜನಾಂಗದಾಗಿದೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 