ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ಸದೃಢತೆ ಕಾಮತ್ ಪ್ರೆಸ್
Mental Resilience Through Religious Programs
ಲೋಕದರ್ಶನ ವರದಿ
ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ಸದೃಢತೆ
ಕಾಮತ್ ಪ್ರೆಸ್
ಮಂಜರಿ 12: ಧಾರ್ಮಿಕ ಕಾರ್ಯಕ್ರಮಗಳು ಜನರನ್ನು ಮಾನಸಿಕವಾಗಿ ಸದೃಢಗೊಳಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಗೋಕಾಕ ತಾಲೂಕಿನ ಕರಪಟ್ಟಿ ಗ್ರಾಮದ ಬಸವರಾಜ ಮಹಾಸ್ವಾಮೀಜಿ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಶಿವ ಚರಿತಾಮೃತ ಪುರಾಣ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಮಾನವೀಯತೆ ಬೆಳೆಸಲು ಧಾರ್ಮಿಕ ಕಾರ್ಯಕ್ರಮಗಳ ಅಗತ್ಯವಿದೆ. ಶ್ರಾವಣ ಮಾಸವು ಪೂಜೆ, ಪುನಸ್ಕಾರ ಹಾಗೂ ದೇವರ ಧ್ಯಾನದಲ್ಲಿ ತಲ್ಲೀನರಾಗುವ ಪವಿತ್ರ ಮಾಸವಾಗಿದ್ದು, ಇಂತಹ ಆಚರಣೆಗಳು ಮನುಷ್ಯನ ಬದುಕಿಗೆ ಆಧ್ಯಾತ್ಮಿಕ ನೆಮ್ಮದಿ ನೀಡುತ್ತವೆ ಎಂದು ಹೇಳಿದರು.
ಶಿವಾಲಯ ಸಮಿತಿ ಕಾರ್ಯದರ್ಶಿ ನಾಗೇಶ ಮಜುಕರ ಮಾತನಾಡಿ, ಮಾನವನ ವಿಕಾಸ ಮತ್ತು ಅಭ್ಯುದಯಕ್ಕೆ ಪೂರಕವಾದ ವಿಚಾರಗಳ ಕುರಿತು ಕಳೆದ 30 ದಿನಗಳಿಂದ ಶ್ರಾವಣ ಪೂಜೆ, ಪುನಸ್ಕಾರ ಹಾಗೂ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಅಣ್ಣಾಸಾಹೇಬ ಜಕಾತಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ಶಾಸ್ತ್ರಿ ಅತಿಥಿಯಾಗಿ ಉಪಸ್ಥಿತರಿದ್ದರು. ಗೋಕಾಕದ ಬ್ರಹ್ಮಶ್ರೀ ಬಸವರಾಜ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಶರಣರ ಚರಿತಾಮೃತ ಪ್ರವಚನದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಶಾಂತ ಕೋರೆ, ತಮಣ್ಣಿ ಗುಂಡಕಲ್ಲೆ, ಶಿವಾಲಯ ಟ್ರಸ್ಟ್ನ ಕಾರ್ಯದರ್ಶಿ ಎನ್.ಎಂ. ಮಜುಕರ, ತುಕಾರಾಮ ಪಾಟೀಲ, ಸುಧಾ ಪಾಟೀಲ, ಸವಿತಾ ಕೋರೆ, ಗಿರಿಜಾ ಪಾಟೀಲ, ಸೋನಾಲಿ ಖಟಾವೆ, ನಗರತ್ನಮ್ಮ ಶೆಟ್ಟಿ ಸೇರಿದಂತೆ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 